ಭಾನುವಾರ, ಏಪ್ರಿಲ್ 11, 2021
32 °C

ಗ್ರಾಮಸಭೆ ನಡೆಸದೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಗ್ರಾಮಸಭೆ ಕರೆಯದೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.

ಗ್ರಾಮಸಭೆ ನಡೆಸದೆ ಉದ್ಯೋಗಕ್ಕಾಗಿ ಕಾಮಗಾರಿ ಆಯ್ಕೆ ಪ್ರಕ್ರಿಯೆ ನಡೆಸಿ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಜಿ.ಪಂ. ಹಾಗೂ ತಾ.ಪಂ. ಅಧಿಕಾರಿಗೆ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಯಾವುದೇ ಕಾರಣಕ್ಕೂ ಪರಿಶೀಲನೆ ನಡೆಸಿ ಯೋಜನೆಗಳಿಗೆ ಅನುಮತಿ ನೀಡಬಾರದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮುಖಂಡರಾದ ಮರಡಿಹಳ್ಳಿ ರವಿಕುಮಾರ್, ಬಿ.ಎಂ. ಬಸವರಾಜ್, ಓಂಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೌರಸಮುದ್ರ ರಸ್ತೆಯಿಂದ ತೋಟದ ಮನೆಗಳಿಗೆ ಸಾಗುವ ಮಾರ್ಗ ಗ್ರಾ.ಪಂ. ವ್ಯಾಪ್ತಿಗೆ ಸೇರಿದ್ದು, ಇಲ್ಲಿನ ಸುತ್ತಮುತ್ತ ವಾಸಿಗಳು ಸರಿಯಾಗಿ ಮನೆ ಕಂದಾಯ ಪಾವತಿಸಿರುತ್ತಾರೆ. ಈ ಗ್ರಾಮದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಮಳೆ ಬಂದಾಗ 5 ಕಿ.ಮೀ.ವರೆಗೂ ಮಣ್ಣಿನ ರಸ್ತೆಯಿದ್ದು ಬೇಡರೆಡ್ಡಿಹಳ್ಳಿ ಮಾರ್ಗವಾಗಿ ಚಲಿಸುವ ಮಾರ್ಗದ ವಾಸದ ಮನೆಗಳ ಹತ್ತಿರ ರಸ್ತೆಯಲ್ಲಿ ನೀರು ನಿಂತು ಸಂಚರಿಸಲು ಕಷ್ಟವಾಗುತ್ತದೆ. ಯೋಗ್ಯ ರಸ್ತೆಗಳನ್ನು ನಿರ್ಮಿಸುವಂತೆ ಕಳೆದ 5 ವರ್ಷದಿಂದ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹೋಟೆಲ್, ಲಾಡ್ಜ್‌ಗಳಲ್ಲಿ ಕುಳಿತು ಮನಬಂದಂತೆ ಕ್ರಿಯಾಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಕ್ಷಣವೇ ಗ್ರಾಮಸಭೆ ನಡೆಸಿ ಕ್ರಿಯಾ ಯೋಜನೆಗೆ ಇಲ್ಲಿಯೇ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.