ಲಂಡನ್ (ಪಿಟಿಐ): ಪ್ರಯಾಣಿಕರೊಬ್ಬರ ಲಗೇಜ್ ತಪಾಸಣೆ ವೇಳೆ ಕಂಡ `ಕ್ಷೌರದ ದ್ರಾವಣ(ಆಫ್ಟರ್ಶೇವ್)ದ ಶೀಷೆಯನ್ನು~ ಭದ್ರತಾ ಸಿಬ್ಬಂದಿ ಕೈ ಬಾಂಬ್ ಎಂದು ತಪ್ಪಾಗಿ ಅರ್ಥೈಸಿಕೊಂಡ ಪರಿಣಾಮವಾಗಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.

ಎಡಿನ್ಬರೊ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಜಿಮ್ಮಿ ಹೊ ಎಂಬ ಪ್ರಯಾಣಿಕರೊಬ್ಬರ ಚೀಲವನ್ನು ಸ್ಕಾನ್ ಮಾಡುವಾಗ ಯಂತ್ರ, ಗ್ರೆನೇಡ್ ಆಕಾರದ ಶೀಷೆಯೊಂದು ಗುರುತಿಸಿತು.

`ತಕ್ಷಣ ವಿಮಾನ ನಿಲ್ದಾಣ ಪೊಲೀಸರು ನನ್ನನ್ನು ಸುತ್ತವರೆದರು. ಸುತ್ತಲಿದ್ದ ಪ್ರಯಾಣಿಕರೆಲ್ಲ ನನ್ನತ್ತ ನೋಡುತ್ತಿದ್ದರೆ. ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೇ, ಒಂದು ಕ್ಷಣ ಗಾಬರಿಗೊಳಗಾದೆ~ ಎಂದು ಹೋ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೈಬಾಂಬ್ ತರಹದ ಶೀಷೆಯನ್ನು ಹೊರಕ್ಕೆ ತೆಗೆದುಕೊಂಡು ಹೋಗಿ 30 ನಿಮಿಷಗಳ ಕಾಲ ತಪಾಸಣೆ ನಡೆಸಿದರು. ನಂತರ ಅದು ಆಫ್ಟರ್ಶೇವ್ ಶೀಷೆ ಎಂದು ಗೊತ್ತಾಯಿತು. 45 ನಿಮಿಷಗಳ ನಂತರ ಹೋ ಅವರಿಗೆ ಮುಂದಿನ ಪ್ರಯಾಣಕ್ಕೆ ಅನುಮತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.