ಗುರುವಾರ , ಜೂನ್ 24, 2021
29 °C
ಕ್ರಿಕೆಟ್‌: ದಕ್ಷಿಣ ಆಫ್ರಿಕಾ ತಂಡದ ನಾಯಕನ ಅಚ್ಚರಿಯ ನಿರ್ಧಾರ

ಗ್ರೇಮ್‌ ಸ್ಮಿತ್‌ ನಿವೃತ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್‌ (ಎಎಫ್‌ಪಿ): ದಕ್ಷಿಣ ಆಫ್ರಿಕಾ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಗ್ರೇಮ್‌ ಸ್ಮಿತ್‌ ಅವರು ಅಂತರ ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಯಾಗಲು ನಿರ್ಧರಿಸಿದ್ದಾರೆ.ಆಸ್ಟ್ರೇಲಿಯಾ  ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಆಂತಿಮ ಟೆಸ್ಟ್‌ ಬಳಿಕ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದೂರವಾಗುವುದಾಗಿ ಸ್ಮಿತ್‌ ಸೋಮವಾರ ಪ್ರಕಟಿಸಿದ್ದಾರೆ. ಕೇಪ್‌ ಟೌನ್‌ನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯ ಬುಧ ವಾರ ಕೊನೆಗೊಳ್ಳಲಿದೆ. ಇದರೊಂದಿಗೆ ಸ್ಮಿತ್‌ ಅವರ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ತೆರೆಬೀಳಲಿದೆ.33 ಹರೆಯದ ಸ್ಮಿತ್‌ ಕೈಗೊಂಡ ಅನಿರೀಕ್ಷಿತ ನಿರ್ಧಾರ ಕ್ರಿಕೆಟ್‌ ವಲಯದಲ್ಲಿ ಅಚ್ಚರಿ ಉಂಟುಮಾಡಿದೆ. ಆಸೀಸ್‌ ವಿರುದ್ಧದ ಅಂತಿಮ ಟೆಸ್ಟ್‌ಗೆ ಆರಂಭದ ಮುನ್ನಾದಿನ ನಡೆಸಿದ್ದ ಸುದ್ದಿ ಗೋಷ್ಠಿಯಲ್ಲಿ ಸ್ಮಿತ್‌, ‘ನಿವೃತ್ತಿಯಾಗುವ ಯೋಜನೆ ಸದ್ಯಕ್ಕಿಲ್ಲ’ ಎಂದಿದ್ದರು.‘ಜೀವನದಲ್ಲಿ ನಾನು ಕೈಗೊಂಡ ಅತ್ಯಂತ ಕಠಿಣ ನಿರ್ಧಾರ ಇದು. ಹೋದ ವರ್ಷ ಏಪ್ರಿಲ್‌ ತಿಂಗಳಲ್ಲಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ನಿವೃತ್ತಿಯ ಬಗ್ಗೆ ಚಿಂತಿಸತೊಡಗಿದ್ದೆ’ ಎಂದು ಸ್ಮಿತ್‌ ಹೇಳಿದ್ದಾರೆ.‘ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುವುದು ನನ್ನ ಉದ್ದೇಶ. ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ    ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನ ಕೊನೆಗೊಳಿ ಸುವ ಅವಕಾಶ ನನಗೆ ಲಭಿಸಿದೆ’ ಎಂದಿದ್ದಾರೆ. ಸ್ಮಿತ್‌ 2002 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇದೇ  ಕ್ರೀಡಾಂಗಣದಲ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.ಆಸೀಸ್‌ ವಿರುದ್ಧ ಈಗ ನಡೆಯು ತ್ತಿರುವ ಪಂದ್ಯ ಸ್ಮಿತ್‌ ಅವರ 117ನೇ ಟೆಸ್ಟ್‌ ಟೆಸ್ಟ್‌ ಆಗಿದೆ. ಅಂತಿಮ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅವರು ವಿಫಲರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.