ಭಾನುವಾರ, ಮಾರ್ಚ್ 26, 2023
31 °C

ಘನ ತ್ಯಾಜ್ಯ ನಿರ್ವಹಣೆ ಸ್ಥಗಿತಕ್ಕೆ ಸ್ಥಳೀಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಘನ ತ್ಯಾಜ್ಯ ನಿರ್ವಹಣೆ ಸ್ಥಗಿತಕ್ಕೆ ಸ್ಥಳೀಯರ ಆಗ್ರಹ

ಬೆಂಗಳೂರು:  ಲಿಂಗದೀರನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಅವರು  ಶನಿವಾರ ದಿಢೀರ್‌ ಭೇಟಿ ನೀಡಿ, ಘಟಕದಿಂದಾಗಿ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.ಘಟಕವನ್ನು ಗುತ್ತಿಗೆ ಪಡೆದ ಐಎಲ್ಎಫ್ಎಸ್ ಸಂಸ್ಥೆಯು ತ್ಯಾಜ್ಯ  ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಘಟಕವನ್ನು ಮುಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ‘ಘಟಕದ ತ್ಯಾಜ್ಯದಿಂದಾಗಿ ಸೊಳ್ಳೆ ಮತ್ತು ನೊಣಗಳ ಹಾವಳಿ ಹೆಚ್ಚಾಗಿದೆ.  ಕಲುಷಿತ ನೀರು ಸೋಂಪುರ ಕೆರೆಗೆ ಸೇರುತ್ತಿದ್ದು, ಅದರ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ.  ಕೆರೆಯ ನೀರು ಕುಡಿದ ದನಕರುಗಳು, ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತಿವೆ. ಸ್ಥಲೀಯರ ಆರೋಗ್ಯವೂ ಹದಗೆಡುತ್ತಿದೆ’ ಎಂದು ಸ್ಥಳೀಯರು ದೂರಿದರು. ‘ಷರತ್ತು ಮರೆತ ಗುತ್ತಿಗೆದಾರರು: ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಘನತ್ಯಾಜ್ಯ ಘಟಕದಿಂದ ಹೊರಹೊಮ್ಮುವ ದುರ್ನಾತದಿಂದಾಗಿ ಬಿಡಿಎ ನಿರ್ಮಾಣದ ಬನಶಂಕರಿ 6ನೇ ಹಂತ, 5ನೇ ಬ್ಲಾಕ್ ಬಡಾವಣೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು  ತೊಂದರೆ ಎದುರಿಸುತ್ತಿದ್ದಾರೆ.   ಘಟಕದ ಕಲುಷಿತ ನೀರು ಅಂತರ್ಜಲ ಸೇರಿ ಅದರಿಂದಲೂ  ಸ್ಥಳೀಯರ ಆರೋಗ್ಯದ ಮೇಲೆ  ದುಷ್ಪರಿಣಾಮ ಉಂಟಾಗಿದೆ’ ಎಂದು  ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸಿ.ಮುನಿರಾಜು ಇದ್ದರು. ಸೀಗೇಹಳ್ಳಿ ಕನ್ನಹಳ್ಳಿ ಘಟಕಗಳಿಗೆ ಸಚಿವರು ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.