ಮಂಗಳವಾರ, ಮೇ 24, 2022
27 °C

ಘೋಂದಲ ಸೃಷ್ಟಿಸಿದ ನಾಮಫಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ:  ಬೀದರ್ ತಾಲ್ಲೂಕಿನ ಅಲ್ಮಾಸಪುರದಿಂದ ನ್ಯಾಲಕಲ್ ಕಡೆಗೆ ಹೋಗುವಾಗ ಕರ್ನಾಟಕದ ಗಡಿ ಪ್ರಾರಂಭವೋ ಅಥವಾ ಮುಕ್ತಾಯವೋ...? ರಾಜ್ಯದ ಗಡಿ ದಾಟಿ ಆಂಧ್ರಕ್ಕೆ ತೆರಳುವ ಪ್ರಯಾಣಿಕರ                   ಪ್ರಶ್ನೆ ಇದು.ಈ ಪ್ರಶ್ನೆಗೆ ಕಾರಣವಾದದ್ದು ಲೋಕೋಪಯೋಗಿ ಇಲಾಖೆಯ ಬೀದರ್ ವಿಭಾಗ. ಗಡಿಯಲ್ಲಿ ಆಯಾ ರಾಜ್ಯದ ಗಡಿ ಆರಂಭ- ಮುಕ್ತಾಯ, ಪ್ರಯಾಣಿಕರಿಗೆ ಸ್ವಾಗತ- ಧನ್ಯವಾದಗಳು ಹೆಸರಿನ ಫಲಕಗಳನ್ನು ಹಾಕುವುದು ಸಾಮಾನ್ಯ. ಆದರೆ, ಬೀದರ್ ಲೋಕೋಪಯೋಗಿ ಇಲಾಖೆ ಹಾಕಿರುವ ಫಲಕ ಮಾತ್ರ ಚರ್ಚೆಗೆ ಗ್ರಾಸ         ವೊದಗಿಸಿದೆ.ರಾಜ್ಯದ ಅಲ್ಮಾಸಪುರಕ್ಕೆ ಬರುವ ಮತ್ತು ಆಂಧ್ರದ ಚಿಕುರ್ತಿಗೆ ಹೋಗುವ ದಿಕ್ಕಿನಲ್ಲೂ `ಕರ್ನಾಟಕ ರಾಜ್ಯದ ಸರಹದ್ದು ಪ್ರಾರಂಭ~ ಎಂಬ ಫಲಕ ಅಳವಡಿಸಿ ಗೊಂದಲ ಹುಟ್ಟುಹಾಕಿದೆ ಎಂದು ಆರೋಪ ಪ್ರಯಾಣಿಕರದು.

ಕರ್ನಾಟಕದ ಗಡಿ ಪ್ರಾರಂಭವಾಗುವ ದಿಕ್ಕಿನಲ್ಲಿ `ಸರಹದ್ದು ಪ್ರಾರಂಭ~ ಸರಿಯಾಗಿದೆ. ಆದರೆ, ಆಂಧ್ರದ ಕಡೆಗೆ ಹೋಗುವ ದಿಕ್ಕಿನಲ್ಲಿಯೂ ಇದನ್ನೇ ನಕಲು ಮಾಡಿ ಬರೆದಿರುವುದೇ ಇಂಥದ್ದೊಂದು ಅಚಾತುರ್ಯಕ್ಕೆ ಕಾರಣವಾಗಿದೆ ಎಂದು ಹೇಳುತ್ತಾರೆ.ನಾಮಫಲಕದಲ್ಲಿ ಕರ್ನಾಟಕದ ಗಡಿ ದಾಟಿ ಆಂಧ್ರಕ್ಕೆ ತೆರಳುವ ಪ್ರಯಾಣಿಕರಿಗೆ ಧನ್ಯವಾದಗಳು ಮತ್ತು ಆಂಧ್ರದಿಂದ ಕರ್ನಾಟಕ ಗಡಿ ಪ್ರವೇಶಿಸುವ ಪ್ರಯಾಣಿಕರಿಗೆ ಸುಸ್ವಾಗತ ಎಂದು ಎರಡೂ ದಿಕ್ಕಿನಲ್ಲಿ ಸರಿಯಾಗಿಯೇ ಇದೆ. ಆದರೆ, ಎರಡೂ ಕಡೆ ಕರ್ನಾಟಕ ರಾಜ್ಯದ ಸರಹದ್ದು ಪ್ರಾರಂಭ ಎಂದು ಬರೆದಿರುವುದು ಪ್ರಯಾಣಿಕರನ್ನು      ದಾರಿ ತಪ್ಪಿಸುವಂತಿದೆ ಎಂದು ದೂರುತ್ತಾರೆ ಚಿಲ್ಲರ್ಗಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಹಾಲಿ ಸದಸ್ಯ ಶ್ರೀನಿವಾಸರೆಡ್ಡಿ ಬಿ. ಸುಧಾ.ಲೋಕೋಪಯೋಗಿ ಇಲಾಖೆಯು ಕರ್ನಾಟಕ ವ್ಯಾಪ್ತಿ ಮುಕ್ತಾಯದ ಬದಲು ಪ್ರಾರಂಭ ಎಂದು ಬರೆದಿರುವುದು ಕನ್ನಡಿಗರನ್ನು ನಗೆಪಾಟಲಿಗೀಡು ಮಾಡುವಂತಿದೆ ಎಂದು                    ಅಸಮಾಧಾನ ವ್ಯಕ್ತಪಡಿಸುತ್ತಾರೆ.

 ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳುವುದೇ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.