ಸೋಮವಾರ, ಏಪ್ರಿಲ್ 19, 2021
23 °C

ಚಕ್ರಕ್ಕೆ ವೇಲ್ ಸಿಕ್ಕಿ ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ದ್ವಿಚಕ್ರ ವಾಹನದ ಚಕ್ರಕ್ಕೆ ವೇಲ್ ಸಿಕ್ಕ ಪರಿಣಾಮ ಆರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ಗೋಪಾಲಪುರ ಬಳಿ ಬುಧವಾರ ನಡೆದಿದೆ.ಬಿಳಿದೇಗುಲ ಗ್ರಾಮದ ಪ್ರಸನ್ನ ಎಂಬುವವರ ಪುತ್ರಿ ತೇಜಸ್ವಿನಿ ಮೃತಪಟ್ಟ ದುರ್ದೈವಿ. ವೇಲ್ ಬಿಗಿಯಾಗಿ ಬಿಗಿದುಕೊಂಡ ರಭಸಕ್ಕೆ ರುಂಡ-ಮುಂಡ ಬೇರೆಯಾಗಿದೆ.ಪ್ರಸನ್ನ ಅವರು, ಮಗಳು ತೇಜಸ್ವಿನಿಯ ಕೊರಳಲ್ಲಿದ್ದ ವೇಲ್ ಗಾಳಿಗೆ ವಾಹನದ ಚಕ್ರಕ್ಕೆ ಸಿಲುಕಿದೆ. ಕೊರಳಿಗೆ ಸುತ್ತಿಕೊಂಡಿದ್ದ ವೇಲ್ ಬಿಗಿದುಕೊಂಡ ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್‌ಇನ್‌ಸ್ಪೆಕ್ಟರ್ ಬಾಲಕೃಷ್ಣ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.