ಬುಧವಾರ, ಮೇ 18, 2022
25 °C

ಚಪ್ಪಲಿಗಳ ಸೇಲ್ ಮೇಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಚಪ್ಪಲಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಯಿತು. ಜನರೂ ಮುಗಿ ಬಿದ್ದು ಖರೀದಿ ಮಾಡಿದರು. ಹಾಗಂತ ಇದು ಕಡಿಮೆ ಬೆಲೆಗೆ ಮಾರಾಟ ಮಾಡುವ ‘ಸೇಲ್’ ಮೇಳ ಅಲ್ಲ.

ವಿಶ್ವ ಕನ್ನಡ ಸಮ್ಮೇಳನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ರಸ್ತೆ ಬದಿ ಇರುವ ಡಬ್ಬಾ ಅಂಗಡಿಗಳ ತೆರವು ಮಾಡುತ್ತಿದೆ. ಮಂಗಳವಾರ ಗೊಂಧಳಿಗಲ್ಲಿ ಬಳಿ ಇರುವ ಚಪ್ಪಲಿ ಅಂಗಡಿಗಳ ಮಾಲೀಕರು, ಅಂಗಡಿಗಳನ್ನು ತೆರವುಗೊಳಿಸುವ ಮುನ್ನ ಅಂಗಡಿಯಲ್ಲಿರುವ ಸ್ಟಾಕ್ ಕ್ಲಿಯರ್ ಮಾಡಲು ಯೋಚಿಸಿದರು. ಪರಿಣಾಮ ಕಡಿಮೆ ಬೆಲೆ ಮಾರಾಟಕ್ಕೆ ಇಳಿದರು.ಒಂದೆಡೆ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದರಿಂದ ಮುಂದೆ ಎಲ್ಲಿ ವ್ಯಾಪಾರ ಆರಂಭಿಸಬೇಕು ಎಂಬ ಸಮಸ್ಯೆ ಇದ್ದರೆ, ಮತ್ತೊಂದೆಡೆ ಸ್ಟಾಕ್ ಅನ್ನು ಮನೆಯಲ್ಲಿ ಒಯ್ದು ಇಟ್ಟುಕೊಳ್ಳುವುದು ಎಲ್ಲಿ ಎಂಬ ಸಮಸ್ಯೆ ಅವರಿಗೆ ಎದುರಾಗಿದೆ.ಆದ್ದರಿಂದ ಅಂಗಡಿಗಳನ್ನು ತೆರವುಗೊಳಿಸುವ ಮುನ್ನ ಸ್ಟಾಕ್ ಕ್ಲಿಯರ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಅಷ್ಟು ಬೇಗನೆ ಕೊಂಡುಕೊಳ್ಳುವವರು ಯಾರು? ಅದಕ್ಕೆಂದೇ ಕಡಿಮೆ ಬೆಲೆಗೆ ಮಾರಾಟಕ್ಕೆ ಮಾಡುತ್ತಿದ್ದಾರೆ.ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎರಡು ಬಾರಿ ಕೂಗು ಹಾಕಿದ್ದೇ ತಡ ಜನರು ಒಬ್ಬೊಬ್ಬರಾಗಿಯೇ ಜಮಾಯಿಸತೊಡಗಿಸಿದರು. ಹತ್ತು ನಿಮಿಷದಲ್ಲಿ ಜನರು ಮುಗಿಬಿದ್ದು ಖರೀದಿಸಲಾರಂಭಿಸಿದರು.ಅಂಗಡಿಯಲ್ಲಿ ಗದ್ದಲವಾಗುತ್ತಿದ್ದಂತೆಯೇ ಕೈಚಳಕ ತೋರಿಸುವ ಕೆಲವರು ಅಲ್ಲಿ ಸೇರಿಕೊಂಡರು. ಸದ್ದಿಲ್ಲದೇ ಹಲವಾರು ಜತೆ ಚಪ್ಪಲಿಯೊಂದಿಗೆ ಮಾಯವಾದರು.

ಇದು ಇಂದು ಒಂದು ದಿನದ್ದಲ್ಲ. ಕಳೆದ ಹಲವಾರು ದಿನಗಳಿಂದ ಪಾಲಿಕೆಯು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುತ್ತಿದೆ. ಆ ಅಂಗಡಿಗಳ ಜನರು ಹೀಗೆಯೇ ತಮ್ಮಲ್ಲಿರುವ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಿಕೊಂಡು ಹೋಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.