ಹೊರನಾಡು (ಕಳಸ):  ಇಲ್ಲಿಗೆ ಸಮೀಪದ ಚಿಕ್ಕನಕೊಡಿಗೆಯಲ್ಲಿ ಇದೇ 9ರಿಂದ 13ರವರೆಗೆ 5 ದಿನಗಳ ಕಾಲ ನಡೆಯುವ 24 ತೀರ್ಥಂಕರರ ಪಂಚಕಲ್ಯಾಣಕ್ಕೆ ಪೂರ್ವ ಸಿದ್ಧತೆ ಭರದಿಂದ ನಡೆಯುತ್ತಿದೆ.

ಶ್ರವಣಬೆಳಗೊಳ ಬಿಟ್ಟರೆ ಜೈನ ಧರ್ಮದ ಎಲ್ಲ 24 ತೀರ್ಥಂಕರರನ್ನು ಒಂದೇ ಬಸದಿಯಲ್ಲಿ ಪ್ರತಿಷ್ಟಾಪಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿರುವ ಚಿಕ್ಕನಕೊಡಿಗೆಯಲ್ಲಿ ಕಳೆದ 15 ದಿನಗಳಿಂದಲೂ ಪ್ರತಿದಿನ 50ಕ್ಕೂ ಹೆಚ್ಚು ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ವಿವಿಧ ಕೆಲಸಗಳಲ್ಲಿ ಭಾಗವಹಿಸುತ್ತಿದ್ದಾರೆ. ಒಂದು ವಾರದಲ್ಲೇ ಪಂಚಕಲ್ಯಾಣದ ವಿಧಿಗಳು ಆರಂಭವಾಗಬೇಕಿರುವುದರಿಂದ ರಾತ್ರಿ 12 ಗಂಟೆಯವರೆಗೂ ಕೆಲಸ ಸಾಗುತ್ತಿದೆ.

ಚಿಕ್ಕನಕೊಡಿಗೆಯಲ್ಲಿ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿಯ ಬಸದಿಯನ್ನು 2002ರಲ್ಲಿ ಪ್ರತಿಷ್ಟಾಪನೆ ಮಾಡುವ ಮುನ್ನ ಆ ಪ್ರದೇಶ ಬೋಳುಗುಡ್ಡವಾಗಿತ್ತು. ಆದರೆ ಬಸದಿಗೆ ಭೇಟಿ ನೀಡಿದ ಭಕ್ತರೆಲ್ಲರೂ ಬಸದಿಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡರು. ಅದರ ಫಲವಾಗಿ 9 ವರ್ಷದಲ್ಲೇ ಈ ಬಸದಿಯ ಸುತ್ತಲೂ ಪ್ರಾಂಗಣ ನಿರ್ಮಿಸಿ 24 ತೀರ್ಥಂಕರರ ಬಿಂಬಗಳನ್ನು ಪ್ರತಿಷ್ಟಾಪನೆ ಮಾಡುವ ಮಟ್ಟಕ್ಕೆ ಇಲ್ಲಿ ಧರ್ಮ ಪ್ರಭಾವ ಬೀರಿದೆ.

ತಲಾ 2 ಅಡಿ ಎತ್ತರದ 10 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚದ ಕಪ್ಪು ಶಿಲೆಯ 24 ತೀರ್ಥಂಕರರ ಮೂರ್ತಿಗಳನ್ನು ರಾಜಸ್ಥಾನದ ಹೆಸರು ಬಹಿರಂಗಗೊಳಿಸಲು ಇಚ್ಛಿಸದ ದಾನಿಯೊಬ್ಬರು ಚಿಕ್ಕನಕೊಡಿಗೆಗೆ ರವಾನಿಸಿದ್ದಾರೆ. ಉಳಿದಂತೆ ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆ ಮತ್ತು ಕಳಕೋಡು ಧರಣೇಂದ್ರ ಬಸದಿ ಕಾಮಗಾರಿಗೆ ನೆರವಾಗಿರುವ ಪ್ರಮುಖ ದಾನಿಗಳು. ಚಿಕ್ಕನಕೊಡಿಗೆಯ 18 ಜೈನ ಕುಟುಂಬಗಳ ಜೊತೆಗೆ ಆಸುಪಾಸಿನ ಬಲಿಗೆ, ಹೊರನಾಡು, ಮೇಗುಂದದ ಭಕ್ತರೂ ಶ್ರಮದಾನದ ಮೂಲಕ ಬಸದಿ ನಿರ್ಮಾಣದಲ್ಲಿ ತಮ್ಮ ಪಾತ್ರ ವಹಿಸುತ್ತಿದ್ದಾರೆ.

5 ದಿನಗಳ ಕಾಲ ನಡೆಯುವ ಬಸದಿಯ ಪಂಚಕಲ್ಯಾಣ ಮತ್ತು ಪ್ರತಿಷ್ಟಾಪನೆ ರಾಜ್ಯದ ವಿವಿಧೆಡೆಯಿಂದ ಭಕ್ತಸಮೂಹವನ್ನು ಸೆಳೆಯುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.