ಬುಧವಾರ, ಜೂಲೈ 8, 2020
21 °C

ಚಿಕ್ಕಬಳ್ಳಾಪುರದಲ್ಲಿ ಬಿಎಸ್‌ಎನ್‌ಎಲ್ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರದಲ್ಲಿ ಬಿಎಸ್‌ಎನ್‌ಎಲ್ ಮೇಳ

ಚಿಕ್ಕಬಳ್ಳಾಪುರ: ಅತ್ಯುತ್ತಮ ಸೇವೆ ಕಲ್ಪಿಸುವ ಮತ್ತು ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶದಿಂದ ಬಿಎಸ್‌ಎನ್‌ಎಲ್ ಸಂಸ್ಥೆಯು ನಗರದ ಹಳೆ ಬಸ್ ನಿಲ್ದಾಣದ ಆವರಣಲ್ಲಿ ಬಿಎಸ್‌ಎನ್‌ಎಲ್ ಮೇಳ ಆಯೋಜಿಸಿದೆ. ಮಂಗಳವಾರವೂ ಸಹ ಮೇಳ ನಡೆಯಲಿದೆ.ನೂತನ ಸೇವಾ ಯೋಜನೆಗಳು ಮತ್ತು ಸಿಮ್‌ಕಾರ್ಡ್‌ಗಳನ್ನು ಪರಿಚಯಿಸುತ್ತಿರುವ ಸಂಸ್ಥೆಯು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಪ್ರಯತ್ನ ನಡೆಸಿದೆ.‘ಕರ್ನಾಟಕ ಮಿತ್ರ’ ಮತ್ತು ‘ಪ್ಯಾರಿ ಜೋಡಿ’ ಎಂಬ ನೂತನ ಸೇವಾ ಯೋಜನೆ, ಸಿಮ್‌ಕಾರ್ಡ್‌ಗಳನ್ನು ಪರಿಚಯಿಸಿರುವ ಸಂಸ್ಥೆಯು ಅತ್ಯಂತ ಕಡಿಮೆ ದರದಲ್ಲಿ ಸಿಮ್‌ಕಾರ್ಡ್‌ಗಳನ್ನು ಮಾರುತ್ತಿದೆ. ಹೆಚ್ಚಿನ ಖರ್ಚುವೆಚ್ಚವಿಲ್ಲದೆ ಸೇವಾ ಯೋಜನೆಗಳನ್ನು ಸದ್ಬಳಕೆ ಮಾಡುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.‘ಗ್ರಾಹಕರಿಗೆ ಹೊಸ ಯೋಜನೆಗಳನ್ನು ಪರಿಚಯಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಬಿಎಸ್‌ಎನ್‌ಎಲ್ ಮೇಳ ಆಯೋಜಿಸಲಾಗುತ್ತಿದೆ.

 

‘ಕರ್ನಾಟಕ ಮಿತ್ರ’ ಮತ್ತು ‘ಪ್ಯಾರಿ ಜೋಡಿ’ ಎಂಬ ನೂತನ ಯೋಜನೆಗಳಡಿ ಗ್ರಾಹಕರು ಕಡಿಮೆ ದರದಲ್ಲಿ ಸಿಮ್‌ಕಾರ್ಡ್‌ಗಳನ್ನು ಖರೀದಿಸಬಹುದು. ಜೊತೆಗೆ ಕಡಿಮೆ ದರದಲ್ಲಿ ದೂರವಾಣಿ ಕರೆಗಳನ್ನು ಮಾಡಬಹುದು’ ಎಂದು ಬಿಎನ್‌ಎನ್‌ಎಲ್ ಸಂಸ್ಥೆಯ ಉಪಮಂಡಳ ಅಧಿಕಾರಿ ಸುದರ್ಶನ ಪೂಜಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.