ಶುಕ್ರವಾರ, ಮೇ 27, 2022
31 °C

`ಚಿಕ್ಕೋಡಿ, ನಿಪ್ಪಾಣಿಯಲ್ಲಿ ಹೈಟೆಕ್ ಬಸ್ ನಿಲ್ದಾಣ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: `ಚಿಕ್ಕೋಡಿ ಹಾಗೂ ನಿಪ್ಪಾಣಿಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ, ಚಿಕ್ಕೋಡಿ ಮತ್ತು ಸದಲಗಾ ಪಟ್ಟಣಗಳಲ್ಲಿ ಕುಡಿಯುವ ನೀರು ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸರ್ಕಾರದಿಂದ ಒಟ್ಟು ್ಙ122.25ಕೋಟಿ ಅನುದಾನ ಮಂಜೂರಾಗಿದೆ' ಎಂದು ಸಣ್ಣ ಕೈಗಾರಿಕೆ, ಸಕ್ಕರೆ ಹಾಗೂ ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.ಶಿಥಿಲಗೊಂಡಿರುವ ಚಿಕ್ಕೋಡಿ ಮತ್ತು ನಿಪ್ಪಾಣಿ ಬಸ್‌ನಿಲ್ದಾಣಗಳನ್ನು ನೆಲಸಮಗೊಳಿಸಿ ಹೈಟೆಕ್ ಬಸ್ ನಿಲ್ದಾಣಗಳ ನಿರ್ಮಾಣಕ್ಕಾಗಿ ಚಿಕ್ಕೋಡಿಗೆ ್ಙ 5.25ಕೋಟಿ ಹಾಗೂ ನಿಪ್ಪಾಣಿ ಪಟ್ಟಣಕ್ಕೆ ್ಙ5.50 ಕೋಟಿ  ಅನುದಾನ ಮಂಜೂ ರಾತಿ ಪಡೆದುಕೊಂಡು ಕಾಮಗಾರಿಗಳಿಗೆ ಟೆಂಡರ್ ಕರೆಯ ಲಾಗಿದೆ. ಬರುವ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಪಟ್ಟಣದಲ್ಲಿ  ಪತ್ರಕರ್ತರಿಗೆ ಹೇಳಿದರು.ಹೊಸ ಪೈಪ್‌ಲೈನ್: ಚಿಕ್ಕೋಡಿ ಪಟ್ಟಣದ ಒಳವ್ಯಾಪ್ತಿಯ ಲ್ಲಿರುವ ಹಳೆ ಪೈಪ್‌ಲೈನ್‌ಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಹೊಸ ಪೈಪ್‌ಲೈನ್ ಅಳವಡಿಕೆಗೆ ಯುಐಡಿಎಸ್‌ಎಂಪಿ ಯೋಜನೆಯಡಿ ್ಙ 40 ಕೋಟಿ ಪ್ರಸ್ತಾವನೆಗೆ ರಾಜ್ಯ ಮಟ್ಟದ ಮಂಜೂರಾತಿ ಕಮಿಟಿ ಅನುಮೋದನೆ ನೀಡಿದೆ. ಅದರಂತೆ ಸದಲಗಾ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕಾಗಿ ್ಙ36.50 ಕೋಟಿ  ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗಾಗಿ ್ಙ28.57ಕೋಟಿ  ಪ್ರಸ್ತಾವನೆಗೂ ಅನುಮೋದನೆ ದೊರಕಿದೆ. ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.ಸಾರ್ವಜನಿಕ ಸಲಹೆ ಮೇರೆಗೆ ಕಾಮಗಾರಿ: 2013-14ನೇ ಸಾಲಿಗಾಗಿ ಎಸ್‌ಎಫ್‌ಸಿ ಯೋಜನೆಯಡಿ ಚಿಕ್ಕೋಡಿ ಪಟ್ಟಣಕ್ಕೆ ್ಙ2.61 ಕೋಟಿ ಹಾಗೂ ಸದಲಗಾ ಪಟ್ಟಣಕ್ಕೆ ್ಙ 2.69 ಕೋಟಿ ಅನುದಾನ ಮಂಜೂರಾಗಿದೆ. 13ನೇ ಹಣಕಾಸು ಯೋಜನೆಯಡಿ 2013-14ನೇ ಸಾಲಿಗಾಗಿ ಚಿಕ್ಕೋಡಿ ಪಟ್ಟಣಕ್ಕೆ ್ಙ68.80 ಲಕ್ಷ  ಹಾಗೂ ಸದಲಗಾ ಪಟ್ಟಣಕ್ಕೆ ್ಙ34 ಲಕ್ಷ ಗಳ ಅನುದಾನ ಮಂಜೂರಾಗಿದೆ. ಪಟ್ಟಣದ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಅಗತ್ಯತವಿರುವ ಕಾಮಗಾರಿಗಳನ್ನು ಕೈಗೊಳ್ಳಲು ಪುರಸಭೆಗೆ ಅರ್ಜಿ ನೀಡಬೇಕು. ಆ ಅರ್ಜಿಗಳ ಪರಿಶೀಲನೆ ನಡೆಸಿದ ಬಳಿಕವೇ ಕ್ರಿಯಾಯೋಜನೆ ರೂಪಿಸಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ವಾಜಪೇಯಿ ನಗರ ವಸತಿ ಯೋಜನೆಯಡಿ 2013-14ನೇ ಸಾಲಿಗಾಗಿ ಚಿಕ್ಕೋಡಿ ಪಟ್ಟಣಕ್ಕೆ 75 ಮನೆಗಳು ಹಾಗೂ ಸದಲಗಾ ಪಟ್ಟಣಕ್ಕೆ 40 ಮನೆಗಳು ಮಂಜೂರಾಗಿದ್ದು, ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಹೇಳೀದರು.ಖಡಕಲಾಟ್‌ಗೆ ಪೊಲೀಸ್ ಠಾಣೆ: ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯದಲ್ಲಿ ಒಟ್ಟು 51 ಪೊಲೀಸ್ ಠಾಣೆಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಕಾಯ್ದಿರಿಸಿದ್ದು, ಆ ಪೈಕಿ ಚಿಕ್ಕೋಡಿ ಪಟ್ಟಣದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ತಾಲ್ಲೂಕಿನ ಖಡಕಲಾಟ ಗ್ರಾಮಕ್ಕೆ ಹೊಸ ಪೊಲೀಸ್ ಠಾಣೆ ಮಂಜೂರಾತಿ ಮಾಡಿಸಲಾಗುವುದು ಹಾಗೂ ಪಟ್ಟಣದಲ್ಲಿ ಪೊಲೀಸ್ ವಸತಿ ಗೃಹಗಳು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.ತಾಲ್ಲೂಕಿನಲ್ಲಿ ಶಿಥಿಲಗೊಂಡಿರುವ ಕೆಳಮಟ್ಟದ ಸೇತುವೆಗಳ ಬದಲಿಗೆ ಹೊಸ ಸೇತುವೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳ ಲಾಗುತ್ತಿದ್ದು, ಈಗಾಗಲೇ ಕಲ್ಲೋಳ ಸೇತುವೆ ಬಳಿ ಹೊಸ ಸೇತುವೆ ನಿರ್ಮಾಣಕ್ಕೆ ್ಙ 28ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸ ಲಾಗಿದೆ. ಚೆಂದೂರಟೇಕ್-ಸೈನಿಕ್ ಠಾಕಳಿ ನಡುವೆ ಸೇತುವೆ ನಿರ್ಮಾಣಕ್ಕೂ ್ಙ18 ಕೋಟಿ ಅಂದಾಜು ವೆಚ್ಚದ ಮರು ಪ್ರಸ್ತಾವ ಸಲ್ಲಿಸಲಾಗಿದೆ. ಉಳಿದ ಕೆಳ ಮಟ್ಟದ ಸೇತುವೆಗಳ ಉನ್ನತಿಕರಣಕ್ಕೂ ಹಂತ ಹಂತವಾಗಿ ಅನುದಾನ ಮಂಜೂರು  ಮಾಡಿಸಲಾಗುವುದು ಎಂದು ಭರವಸೆ ನೀಡಿದರು.ಉಪವಿಭಾಗಾಧಿಕಾರಿ ಡಾ. ರುದ್ರೇಶ ಘಾಳಿ, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಪ್ರಕಾಶ ಕಬಾಡಿ, ಪುರಸಭೆ ಸದಸ್ಯ ಎನ್.ಆರ್.ನೇರ್ಲಿಕರ, ರಾಮಾ ಮಾನೆ, ಸತೀಶ ಕುಲಕರ್ಣಿ, ಚಂದ್ರಶೇಖರ ಮುಂಡೆ, ರವಿ ಮಾಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.