ಚಿತ್ರಕಲೆಯಿಂದಲೂ ಮನೋವಿಕಾಸವೇ? ಎಂದು ಮೂಗಿನ ಮೇಲೆ ಬೆರಳಿಟ್ಟವರಿಗೆ ಹೌದೆನ್ನುತ್ತದೆ ಅಧ್ಯಯನ ವರದಿ. ಅದು ಹೇಗೆ ತಾನೆ ಸಾಧ್ಯ ಎಂಬ ಸಂದೇಹ ಮೂಡಿತೆ?

ನಿಮ್ಮ ಮಗು ವಿಪರೀತ ಗಲಾಟೆ ಮಾಡುತ್ತಿದ್ದರೆ, ಮಂಕಾಗಿ ಕುಳಿತುಕೊಂಡಿದ್ದರೆ, ನಿಮ್ಮಡನೆ ಸಹಜವಾಗಿ ಬೆರೆಯದೇ ಹೋದರೆ ನೀವು ಒಂದು ಪ್ರಯೋಗವೆಂಬಂತೆ ಅದಕ್ಕೆ ಒಂದಷ್ಟು ಪೇಪರ್, ಕಲರ್ಗಳನ್ನು ಕೊಟ್ಟು ಆಮೇಲೆ ನೋಡಿ. ಎಲ್ಲ ಮರೆತಂತೆ ಚಿತ್ರಿಸುತ್ತಾ ತಂತಾನೇ ಮುಖ ಅರಳುವುದನ್ನು ನೀವು ಕಾಣಬಹುದು.

ಚಿತ್ರ ಬರೆಯಲು ಸಣ್ಣದೊಂದು ಸನ್ನಿವೇಶವನ್ನು ಹೇಳುತ್ತಾ, ಅಭಿನಯಿಸಿದಂತೆ ಮಾಡಿ `ಹೀಗಿದ್ದರೆ, ಹೀಗಿದ್ದರೆ~ ಎಂದು ನೀವೂ ಏನಾದರೂ ಒಂದು ಚಿತ್ರ ಬರೆಯಿರಿ. ಆಗ ಮಗು `ನಾನೂ ಮಾಡಿ ತೋರಿಸುತ್ತೇನೆ~ ಎಂದು ಸರಸರನೆ ಚಿತ್ರ ಬರೆಯುತ್ತ ಆ ಬಗ್ಗೆ ಖುಷಿಯಿಂದ ಹೇಳತೊಡಗುತ್ತದೆ.

ಮಗು ಚಿತ್ರದ ಮೂಲಕ ಅನೇಕಾನೇಕ ವಿಷಯಗಳನ್ನು ಸುಲಭವಾಗಿ ತಿಳಿಯುತ್ತಾ ಸಾಗುತ್ತದೆ. ಒಂದು ಮರದ ಚಿತ್ರ ಬರೆದರೆ ಎಲೆ, ಬೇರು, ರೆಂಬೆ, ಕೊಂಬೆ, ಕುಡಿ, ಹೀಚು ಹೀಗೆ ಎಲ್ಲವನ್ನು ವಿವರವಾಗಿ ಸೇರಿಸುತ್ತ ಅದು ಆನಂದಿಸುವುದನ್ನು ನೋಡಿ ನಿಮಗೇ ಅಚ್ಚರಿಯಾಗುತ್ತದೆ. ಇಂಥ ಚಟುವಟಿಕೆ ಅದಕ್ಕೆ ಆನಂದದ ಟಾನಿಕ್ ಒದಗಿಸುತ್ತದೆ. ಅದೇನು, ಇದೇನು ಎನ್ನುತ್ತಾ ಉತ್ತರ ಕೇಳುತ್ತಲೆ ಚಿತ್ರವನ್ನು ನೆನಪಿಗೆ ತಂದುಕೊಂಡು ಕಲಿಯುತ್ತದೆ.

ನೂರು ಶಬ್ದಗಳು ಹೇಳಬಹುದಾದುದನ್ನು ನಾಲ್ಕು ಗೆರೆಯ ಚಿತ್ರವೊಂದರಲ್ಲಿ ಸರಳವಾಗಿ ಹೇಳಬಹುದು. ಅದೇ ಚಿತ್ರಕ್ಕಿರುವ ಸಾಮರ್ಥ್ಯ. ಅದನ್ನು ಬಳಸಿ ಕೊಳ್ಳಬೇಕು, ಆ ಮೂಲಕ ಮಕ್ಕಳ ಮನೋವಿಕಾಸಕ್ಕೆ ನಾವು ನೀರೆರೆ ಯಬೇಕು. ಅದನ್ನು ಬಿಟ್ಟು ಮಕ್ಕಳನ್ನು ಬರೀ ದೂರುವುದು, `ನೋಡು ಆ ಮಗು ಹೇಗೆ ಚೆನ್ನಾಗಿ ಓದಿ ಬರೆಯುತ್ತದೆ; ನೀನೂ ಇದ್ದೀಯ ಶುದ್ಧ ದಂಡ~ ಎಂದು ಹೀಯಾಳಿಸುವುದರಿಂದ ನಿಮ್ಮ ಮಗು ಮತ್ತಷ್ಟು ಮೊಂಡುತನ ಬೆಳೆಸಿಕೊಳ್ಳುತ್ತದೆ.

`ಬಾ ಇಲ್ಲಿ ಕಂದ. ನೋಡು ನಿನಗಾಗಿ ಏನೇನು ತಂದಿದ್ದೇನೆ~ ಎಂದು ದಿನಕ್ಕೊಂದು ಸಲ ಅಲ್ಲದೇ ಹೋದರೂ ವಾರಕ್ಕೊಂದು ಉಡುಗೊರೆ ಎಂಬಂತೆ ಪೆನ್ಸಿಲ್, ಕಲರ್, ಪೇಪರ್, ರಬ್ಬರ್, ಹೀಗೆ ಏನಾದರೂ ಕೊಡಿ. ಮಗುವಿನ ಮುಖದಲ್ಲಿ ಸಂತೋಷ ನೋಡಿ. ಮಗು ಬರೆಯುವ ಚಿತ್ರವನ್ನು ನೋಡಿ, ಮೆಲ್ಲಗೆ ಹೂಮುತ್ತು ಕೊಡಿ, ಪ್ರೋತ್ಸಾಹದ ನುಡಿ ಆಡಿ. ಸಾಧ್ಯವಾದರೆ ನೀವೂ ಆ ಮಗುವಿನ ಜೊತೆಯಲ್ಲಿ ಚಿತ್ರ ಬರೆಯಲು ತೊಡಗಿ, ಎಲ್ಲ ಜಂಜಡಗಳನ್ನು ಮರೆತು ಆನಂದಿಸಿ. ನಿಮ್ಮ ಮಗುವನ್ನೂ ಬೆಳೆಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.