`ಚಿನ್ನದ ಗಣಿ ಆಗಸ್ಟ್ನಲ್ಲಿ ಟೆಂಡರ್'
ಕೆಜಿಎಫ್: ಚಿನ್ನದ ಗಣಿಯ ಪುನರಾರಂಭಕ್ಕೆ ಈಚೆಗೆ ಸುಪ್ರಿಂಕೋಟ್ ನೀಡಿರುವ ಆದೇಶ ಸಕಾರಾತ್ಮಕ ಬೆಳವಣಿಗೆ ಎಂದು ಭಾರತ್ ಚಿನ್ನದ ಗಣಿ ನೌಕರರ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ದಿವಾಕರ್ ಸೋಮವಾರ ಇಲ್ಲಿ ಹೇಳಿದರು.
ಜಾಗತಿಕ ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ತೀರ್ಪು ಬಂದ ದಿನವೇ ಗಣಿ ಸಚಿವ ದಿನ್ಸಾ ಪಟೇಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ, ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕ ನರೇಶ್ಕುಮಾರ್ ಭಾಗವಹಿಸಿದ್ದರು. ಟೆಂಡರ್ ಪ್ರಕ್ರಿಯೆ ಕೂಡಲೇ ನಡೆಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದೇ ಆಗಸ್ಟ್ನಲ್ಲಿ ಟೆಂಡರ್ ಕರೆಯುವ ಸಂಭವವಿದೆ. ಜನವರಿ ಹೊತ್ತಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬಹುದು. ನಂತರ ಕಾರ್ಮಿಕರಿಗೆ ಬರಬೇಕಾದ 52 ಕೋಟಿ ರೂಪಾಯಿ ಬಾಕಿ ಹಣ ಸೇರಿದಂತೆ ಇತರ ಸವಲತ್ತು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದರು.
ಸಂಘಟನೆಗೆ ವಿರುದ್ಧ ಕೆಲಸ ಮಾಡಿದ 15 ಮಂದಿಯನ್ನು ತೆಗೆದುಹಾಕಲಾಗಿದೆ. 12 ವರ್ಷಗಳ ಬಳಿಕ ಚಿನ್ನದ ಗಣಿ ಪುನರಾರಂಭವಾಗುತ್ತಿದೆ. ಕಾರ್ಮಿಕರು ಕೂಡ ಎಂದು ಗಣಿ ಆರಂಭವಾಗುತ್ತದೆ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಇಂಥ ವೇಳೆ ಕಾರ್ಮಿಕರನ್ನು ಗೊಂದಲಕ್ಕೆ ಈಡು ಮಾಡುವ ಕೆಲಸಕ್ಕೆ ಯಾವುದೇ ಕಾರ್ಮಿಕ ಮುಖಂಡರು ಮಾಡಬಾರದು ಎಂದು ದಿವಾಕರನ್ ಮನವಿ ಮಾಡಿದರು.
ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ನಾರಾಯಣಸ್ವಾಮಿ, ಚಾರ್ಲ್ಸ್, ಮಿಲಿಂದ್, ಚಂದ್ರಶೇಖರ್, ಜೇಮ್ಸ, ನಟರಾಜ್, ಕೆ.ರಾಜೇಂದ್ರನ್, ಜಯರಾಂ, ಸೆಲ್ವರಾಜ್ ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.