ನವದೆಹಲಿ (ಪಿಟಿಐ): ಮಂಗಳವಾರ ದಾಖಲೆ ಮಟ್ಟ ತಲುಪಿದ್ದ ಚಿನ್ನದ ಧಾರಣೆ, ಬುಧವಾರದ ವಹಿವಾಟಿನಲ್ಲಿ ್ಙ930 ಇಳಿಕೆಯಾಗಿದ್ದು, 10 ಗ್ರಾಂಗಳಿಗೆ ್ಙ27,820ರಷ್ಟಾಗಿದೆ.
ಬೆಳ್ಳಿ ಧಾರಣೆಯೂ ಕೆ.ಜಿಗೆ ್ಙ2,100 ಕುಸಿತ ಕಂಡಿದೆ.

ಷೇರುಪೇಟೆಗಳು ಚೇತರಿಸಿಕೊಂಡಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಉತ್ಸಾಹ ತಗ್ಗಿರುವುದು ದಿಢೀರ್ ಬೆಲೆ ಇಳಿಕೆಗೆ ಕಾರಣ. ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗಳಿಗೆ ್ಙ28,750 ತಲುಪಿತ್ತು. ದಾಖಲೆ ಮಟ್ಟ ತಲುಪುತ್ತಿದ್ದಂತೆ ಹೂಡಿಕೆದಾರರು ಒಮ್ಮಲೆ ಚಿನ್ನದ ಮಾರಾಟಕ್ಕೆ ಮುಂದಾಗಿದ್ದು ಕೂಡ ಬೆಲೆ ಇಳಿಯುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಬುಧವಾರ ಬೆಳ್ಳಿ ಧಾರಣೆಯೂ ಕೆ.ಜಿಗೆ ್ಙ2,100ರಷ್ಟು ಇಳಿಕೆ ಕಂಡಿದ್ದು, ್ಙ63,000ರಷ್ಟಾಗಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಚಿನ್ನ, ಬೆಳ್ಳಿ ಬೆಲೆಗಳ ಕಣ್ಣಾಮುಚ್ಚಾಲೆಯಾಟ ಮುಂದುವರೆಯುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ 34.63 ಡಾಲರ್ಗಳಷ್ಟು ಇಳಿಕೆಯಾಗಿದ್ದು, ಪ್ರತಿ ಔನ್ಸ್ಗೆ 1,840 ಡಾಲರ್ ತಲುಪಿದೆ.

ನವದೆಹಲಿಯಲ್ಲಿ 99.9 ಮತ್ತು 99.5 ಶುದ್ಧತೆ ಚಿನ್ನದ ಧಾರಣೆ ಕ್ರಮವಾಗಿ ್ಙ27,820 ಮತ್ತು ್ಙ27,670 ರಷ್ಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.