ಶುಕ್ರವಾರ, ಫೆಬ್ರವರಿ 26, 2021
28 °C

ಚಿಲವಾರ ಬಂಡಿ ಏತ ನೀರಾವರಿ: ಶೀಘ್ರ ಟೆಂಡರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಲವಾರ ಬಂಡಿ ಏತ ನೀರಾವರಿ: ಶೀಘ್ರ ಟೆಂಡರ್

ಹಗರಿಬೊಮ್ಮನಹಳ್ಳಿ: ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ತಾಲ್ಲೂಕಿನ ಮಹತ್ವದ ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಶಾಸಕ ನೇಮರಾಜನಾಯ್ಕ ಪ್ರಕಟಿಸಿದರು.ತಾಲ್ಲೂಕಿನ ಬ್ಯಾಸಿಗದೇರಿ ಗ್ರಾಮದ ಸರಕಾರಿ ಶಾಲೆಗಳ ಸಮುಚ್ಚಯದ ಪ್ರಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲೆಗಾಗಿ ನಾವು ನೀವು ಸಮಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈಗಾಗಲೆ ಯೋಜನೆಗೆ ಸರಕಾರದ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹೆಚ್ಚಾಗಿ ದಲಿತ ರೈತರು ಫಲಾನುಭವಿಗಳಾಗಿರುವ 8 ಸಾವಿರ ಎಕರೆ ಪ್ರದೇಶ ನೀರಾವರಿಗೊಳಪಡುವ ಈ ಬೃಹತ್ ಯೋಜನೆಯ ಚಾಲನೆಗೆ ಒಟ್ಟು ರೂ20.68ಕೋಟಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.ತಾಲ್ಲೂಕಿನ ಬರಡು ಪ್ರದೇಶಗಳಾದ ಬ್ಯಾಸಿಗದೇರಿ, ಮುಟುಗನಹಳ್ಳಿ, ನಂದೀಪುರ, ಸೊಬಟಿ, ಕೋಡಿಹಳ್ಳಿ ಗ್ರಾಮಗಳ ಸುಮಾರು 2000 ಎಕರೆ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನೂತನ ಏತ ನೀರಾವರಿ ಯೋಜನೆಯ ಜಾರಿಗೆ ಚಿಂತನೆ ನಡೆದಿದೆ ಎಂದರು.ವಸತಿ ಯೋಜನೆಯಡಿ, ಕ್ಷೇತ್ರ ವ್ಯಾಪ್ತಿಯ ಮೊದಲ ಹಂತದ  8000 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ.  ವಸತಿ ನಿಗಮದಿಂದ ಅನುಮೋದನೆ ಪಡೆಯಲಾಗಿರುವ ಎರಡನೆ ಹಂತದ 12000 ಮನೆಗಳ ಕಾಮಗಾರಿಗೆ ಅತಿ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸುವ ವಿಶ್ವಾಸ ವ್ಯಕ್ತಪಡಿಸಿದರು.ಕಡ್ಲಬಾಳು, ಹಂಪಾಪಟ್ಟಣ, ಬ್ಯಾಸಿಗ ದೇರಿ ಮತ್ತು ಹನಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಗುಡಿಸಲು ವಾಸಿಗಳ ಸಮೀಕ್ಷೆ ನಡೆಸಲಾಗಿದೆ. ಎರಡನೆ ಹಂತದಲ್ಲಿ ಈ ನಾಲ್ಕು ಗ್ರಾಮಗಳ ವಸತಿ ರಹಿತರಿಗೆ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಪಟ್ಟಣದ ಹೊರ ವಲಯದ ರಾಮರಹೀಮ್ ನಗರದ ಬಳಿ ಸರಕಾರಿ ನಿವೇಶನದಲ್ಲಿ ಕೆಲವು ಪಟ್ಟಭದ್ರರು ಅಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿ ರುವುದು ತಮ್ಮ ಗಮನಕ್ಕೆ ಬಂದಿದೆ. ಅಕ್ರಮ ಮನೆಗಳನ್ನು ತೆರವುಗೊಳಿಸ ಲಾಗುತ್ತದೆ ಎಂದು ಹೇಳಿದರು.ನಂದೀಪುರ ಮಹೇಶ್ವರ ಸ್ವಾಮೀಜಿ, ತಾ.ಪಂ.ಮಾಜಿ ಅಧ್ಯಕ್ಷ ಪಿ.ಸೂರ್ಯ ಬಾಬು, ಎಪಿಎಂಸಿ ಅಧ್ಯಕ್ಷ ಕೆ.ರೋಹಿತ್, ಬಿಜೆಪಿ ಮುಖಂಡರಾದ ಬೇವಿನಹಳ್ಳಿ ಶ್ರೀನಿವಾಸ್, ಇರ್ಫಾನ್, ಸಿ.ಎಚ್. ಸಿದ್ಧರಾಜ್, ಖಲೀಲ್‌ಸಾಬ್, ಮಂಜುಗೌಡ, ಅಡವಿಆನಂದದೇವನ ಹಳ್ಳಿ ಕೊಟ್ರೇಶ್, ಗ್ರಾ.ಪಂ.ಸದಸ್ಯ ಕನಕಪ್ಪ, ಕಡ್ಲಬಾಳು ಮಲ್ಲೇಶ್ ಹಾಗೂ ಗಫೂರ್‌ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.