ಭಾನುವಾರ, ಜೂನ್ 13, 2021
25 °C

ಚೀನಾ ಸೇನಾ ಬಜೆಟ್ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ): ಬಲಾಢ್ಯ ಆರ್ಥಿಕ ರಾಷ್ಟ್ರವಾಗಿ ಬೆಳೆಯುತ್ತಿರುವ ಚೀನಾ ಆರ್ಥಿಕ ಬೆಳವಣಿಗೆಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಸೇನೆಯ ಬಲವರ್ಧನೆಗೂ ನೀಡುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಸೇನೆಗೆ ಹಣವನ್ನು ತೆಗೆದಿರಿಸಿದೆ.2011ರ ಬಜೆಟ್‌ನಲ್ಲಿ ಸೇನೆಗೆ 9,200 ಕೋಟಿ ಡಾಲರ್ ಹಣ ಮೀಸಲಿಟ್ಟಿದ್ದ ಸರ್ಕಾರ, ಈ ಬಾರಿ 10,640 ಕೋಟಿ ಡಾಲರ್ ತೆಗೆದಿರಿಸಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ 11.2ರಷ್ಟು (1440 ಕೋಟಿ ) ಹೆಚ್ಚು. ಕಳೆದ ವರ್ಷ ದೇಶ ಆಂತರಿಕ ಭದ್ರತೆಗಾಗಿಯೇ ಪ್ರತ್ಯೇಕವಾಗಿ 10,000 ಕೋಟಿ ಡಾಲರ್ ಖರ್ಚು ಮಾಡಿದೆ.ಭಾನುವಾರ ರಾಜಧಾನಿಯಲ್ಲಿ ಆರಂಭವಾದ 11ನೇ ರಾಷ್ಟ್ರೀಯ ಶಾಸನಸಭೆಯಲ್ಲಿ ಸರ್ಕಾರದ ವಕ್ತಾರ ಲೀ ಝ್ಹೋಜಿಂಗ್ ಅವರು ಈ ವಿಷಯವನ್ನು ತಿಳಿಸಿದರು. ಸೋಮವಾರದಿಂದ ನಡೆಯಲಿರುವ ಶಾಸನಸಭೆಯ ಅಧಿವೇಶನದಲ್ಲಿ ಬಜೆಟ್‌ಗೆ ಅನುಮೋದನೆ ಪಡೆಯಲಾಗುವುದು ಎಂದರು.ಆರ್ಥಿಕ ಬೆಳವಣಿಗೆಯ ಜತೆಯಲ್ಲಿಯೇ ಸೇನಾ ಬಲವರ್ಧನೆ ಸಾಧಿಸುವ ಮೂಲಕ ಸಮನ್ವಯತೆ ತತ್ವ ಪಾಲಿಸುತ್ತಿದ್ದೇವೆ ಎಂದು ಸೇನಾ ಬಜೆಟ್ ಹೆಚ್ಚಳ ನಿರ್ಧಾರವನ್ನು ಲೀ  ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.ಸೇನೆಯ ಬಲವರ್ಧನೆಗೆ ಚೀನಾ ಅಪಾರ ಪ್ರಮಾಣದ ಹಣ ಸುರಿಯುತ್ತಿದ್ದು ಅಮೆರಿಕ, ಜಪಾನ್ ಸೇರಿದಂತೆ ಅನೇಕ ಬಲಾಢ್ಯ ರಾಷ್ಟ್ರಗಳ ನಿದ್ದೆಗೆಡಿಸಿದೆ. ನೆರೆಯ ಭಾರತ ಕಳೆದ ವರ್ಷ ಸೇನೆಗೆ 3,228 ಕೋಟಿ ಡಾಲರ್ ಹಣ ತೆಗೆದಿರಿಸಿತ್ತು. ಚೀನಾದ ಸೇನಾ ನೀತಿಯ ಮೇಲೆ ಈ ರಾಷ್ಟ್ರಗಳ ಸೇನಾ ನೀತಿ ಅವಲಂಬಿತವಾಗಿದೆ.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.