ಭಾನುವಾರ, ಫೆಬ್ರವರಿ 28, 2021
23 °C

ಚುನಾವಣೆ ಅಕ್ರಮ ತಡೆಗೆ ಕ್ರಮ: ಜೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಅಕ್ರಮ ತಡೆಗೆ ಕ್ರಮ: ಜೈನ್

ಬಾಗಲಕೋಟೆ: ಬಾಗಲಕೋಟೆ ಲೋಕ ಸಭಾ ಚುನಾವಣಾ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳನ್ನು ತಡೆಗಟ್ಟಲು 11 ಜಾಗೃತದಳ ಹಾಗೂ 9 ಚೆಕ್ ಪೋಸ್ಟ್‌ಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮನೋಜ್ ಜೈನ್ ತಿಳಿಸಿದರು.ನವನಗರದ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ನಡೆದ ಸಹಾಯಕ ಚುನಾ ವಣಾಧಿಕಾರಿಗಳು, ವಿವಿಧ ಜಾಗೃತದಳ, ಪೊಲೀಸ್‌ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತ ನಾಡಿದರು.ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ವಿಧಾನಸಭಾವಾರು ಸಹಾಯಕ ಚುನಾ ವಣಾಧಿಕಾರಿಗಳನ್ನು ನಿಯೋಜಿ ಸಲಾಗಿದೆ. ಚುನಾವಣಾ ವೆಚ್ಚ ನಿರ್ವಹಣಾ ಘಟಕಗಳನ್ನು ಸ್ಥಾಪಿಸ ಲಾಗಿದೆ ಎಂದರು.

ಜಿಲ್ಲೆಗೆ ಈಗಾಗಲೇ ವೆಚ್ಚ ವೀಕ್ಷಕ ರಾದ ಮಾಳವಿಕಾ ಮೋಹನ್‌ ಆಗಮಿಸಿ ದ್ದಾರೆ. ಸಂಚಾರಿ ಹಾಗೂ ಸ್ಥಾನಿಕ ಜಾಗೃತದಳಗಳನ್ನು ವಿಡಿಯೊ ಸರ್ವ ಲನ್ಸ್ ತಂಡಗಳನ್ನು ರಚಿಸಲಾಗಿದೆ. ವಿಡಿಯೊ ವಿವಿಂಗ್ ತಂಡ, ಮತಗಟ್ಟೆ ವಾರು ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಿದ್ದು, ಅಬಕಾರಿ ಅಕ್ರಮಗಳ ಮೇಲೆ ನಿಗಾವಹಿಸಲು ಕ್ಷೇತ್ರವಾರು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಜೈನ್ ತಿಳಿಸಿದರು.ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಹದ್ದಿನ ಕಣ್ಣು ಇಡುವಂತೆ ಸೂಚಿಸಿ ದ್ದಾರೆ. ಪ್ರತಿಯೊಂದು ಚೆಕ್ ಪೋಸ್ಟ್‌ ನಲ್ಲಿ ಸರಿಯಾಗಿ ನಿರ್ವಹಣೆ ಆಗುತ್ತಿ ರುವ ಬಗ್ಗೆ ಪ್ರತಿದಿನ ವರದಿ ನೀಡಬೇಕು, ಮತದಾರರಿಗೆ ಆಮಿಷ, ಅಕ್ರಮ ಹಣ, ಮದ್ಯ, ವಸ್ತು ವಿತರಣೆಯಾಗುವುದನ್ನು ನಿಗಾವಹಿಸಿ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.ಅಭ್ಯರ್ಥಿಗಳು ಪ್ರಚಾರ ಜಾಹೀ ರಾತು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ, ವಿವಿಧ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವ ಮೊದಲು ಚುನಾವಣಾ ಮಾಧ್ಯಮ ದೃಢೀಕರಣ ಹಾಗೂ ನಿಗಾ ಸಮಿತಿಯ ಅನುಮತಿ ಪಡೆಯಬೇಕು ಎಂದರು.ಸಾರ್ವಜನಿಕರು ಹೆಚ್ಚಿನ ಪ್ರಮಾಣದ ಹಣವನ್ನು ನಗದಾಗಿ ತೆಗೆದುಕೊಂಡು ಹೋಗುವವರು ಪಾನ್ ಕಾರ್ಡ್‌ ಹಾಗೂ ಅದರ ಪ್ರತಿ, ವ್ಯಾಪಾರ ನೋಂದಣಿ ದೃಢೀಕರಣ ಪತ್ರ, ಬ್ಯಾಂಕ್ ಪಾಸ್‌ಬುಕ್‌ ಪ್ರತಿ ಹಾಗೂ ಡ್ರಾ ಮಾಡಿರುವ ಬ್ಯಾಂಕ್ ಸ್ಟೇಟ್‌ಮೆಂಟ್, ನಗದು ಪಡೆಯುವರ ವಿವರಗಳನ್ನು ಹೊಂದಿರಬೇಕು. ಮತದಾರರಿಗೆ ಹಣ ಹಂಚುವುದು ಹಾಗೂ ಇತರೇ ಸಾಮಗ್ರಿ ಗಳನ್ನು ಹಂಚುವುದು ಕಾನೂನು ಬಾಹಿರ. ಇಂಥವರ ಮೇಲೆ ತೀವ್ರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲೆಯಲ್ಲಿ ಯಾವುದೇ ರೀತಿಯ ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಬಕಾರಿ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದರು.ಚುನಾವಣಾ ವೆಚ್ಚ ವೀಕ್ಷಕರಾದ ಮಾಳವಿಕಾ ಮೋಹನ್, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಿ ಕ್ಷೇತ್ರವಾರು ವೀಕ್ಷಣೆ ಮಾಡಿ ಪ್ರತಿದಿನದ ವೆಚ್ಚದ ವಿವರ ಗಳನ್ನು ನಿಖರವಾಗಿ ಸಲ್ಲಿಸುವಂತೆ  ಸೂಚಿಸಿದರು.ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಹಾಗೂ ಚುನಾ ವಣಾ ವೆಚ್ಚದ ವಿವರಗಳನ್ನು ಅಧಿಕೃತ ವಾಗಿ ಬ್ಯಾಂಕ್ ಖಾತೆ ಮೂಲಕ ನಿರ್ವ ಹಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರಗೌಡ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.