ಸೋಮವಾರ, ಮಾರ್ಚ್ 8, 2021
31 °C
11 ಚಿತ್ರಗಳ ಪ್ರದರ್ಶನ: ಉತ್ತಮ ಪ್ರತಿಕ್ರಿಯೆ

ಚೆನ್ನೈನಲ್ಲಿ ಕನ್ನಡ ಚಿತ್ರೋತ್ಸವದ ಪುಳಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈನಲ್ಲಿ ಕನ್ನಡ ಚಿತ್ರೋತ್ಸವದ ಪುಳಕ

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯು ಚೆನ್ನೈ ಕರ್ನಾಟಕ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಚೆನ್ನೈನ ಆಳ್ವಾರ್ ಪೇಟೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ಸಭಾಂಗಣದಲ್ಲಿ ‘ಚೆನ್ನೈ ಕನ್ನಡ ಚಲನ ಚಿತ್ರೋತ್ಸವ’ ಆಯೋಜಿಸಿತ್ತು.ಮೂರು ದಿನಗಳ ಕಾಲ ನಡೆದ ಚಿತ್ರೋತ್ಸವದಲ್ಲಿ ಕನ್ನಡದ ‘ರಂಗಿ ತರಂಗ’, ‘ಹರಿವು’, ‘ತಿಥಿ’, ‘ಯೂಟರ್ನ್’, ‘ಗೋಧಿ ಬಣ್ಣ ಸಾಧಾ ರಣ ಮೈಕಟ್ಟು’, ‘ಇಷ್ಟಕಾಮ್ಯ’, ‘ಕರ್ವ’, ‘ಫಸ್ಟ್ ರ್‍ಯಾಂಕ್ ರಾಜು’, ‘ಶಿವಲಿಂಗ’ ಸೇರಿದಂತೆ ಒಟ್ಟು 11 ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.ತಿಥಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಯೂಟರ್ನ್ ಚಿತ್ರಗಳನ್ನು ವೀಕ್ಷಿಸಲು ನೂಕುನುಗ್ಗಲು ಉಂಟಾ ಗಿತ್ತು. ನಿರೀಕ್ಷೆಗೂ ಮೀರಿ ಜನರು ಸಭಾ ಭವನಕ್ಕೆ ಹರಿದು ಬಂದರು. ಇದರಿಂದ ಯೂಟರ್ನ್ ಚಿತ್ರವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಪ್ರದರ್ಶನಕ್ಕೂ ಒಂದು ಗಂಟೆ ಮುನ್ನವೇ ಬಂದು ಕುಳಿತುಕೊಂಡಿದ್ದರು.ತಮಿಳು ಚಿತ್ರರಂಗದ ಕಲಾವಿದರು, ನಿರ್ದೇಶಕರು ಕೂಡ ಈ ಚಿತ್ರದ ವೀಕ್ಷಣೆಗೆ ಹಾತೊರೆದರು. ನಟಿ ಸುಹಾಸಿನಿ ಅವರಿಗೆ ಆರಂಭದಲ್ಲಿ ಜಾಗ ಸಿಗಲಿಲ್ಲ. ಕೊನೆಗೂ ಜಾಗ ಗಿಟ್ಟಿಸಿಕೊಂಡು ಚಿತ್ರವನ್ನು ನೋಡಿದರು. ನಿರ್ದೇಶಕ ಕೆ.ಎಸ್. ವಾಸು, ವಿಕ್ರಮನ್, ನಟ ಕೋಕಿಲ ಮೋಹನ್, ಬಿ.ಸರೋಜಾ ದೇವಿ, ಲಕ್ಷ್ಮಿ, ಅಂಬಿಕಾ, ಕುಟ್ಟಿ ಪದ್ಮಿನಿ, ಹೊಸ ತಲೆ ಮಾರಿನ ಅನೇಕ ಕಲಾವಿದರು, ಯುವ ನಿರ್ದೇ ಶಕರು ದಿನದ ಎಲ್ಲ ಪ್ರದರ್ಶ ನಗಳಲ್ಲೂ ಕಾಣಿಸಿಕೊಂಡದ್ದು ವಿಶೇಷ.ಚಿತ್ರೋತ್ಸವ ಯಶಸ್ವಿಯಾಗಿದ್ದರಿಂದ ಚೆನ್ನೈನ ವುಡ್‌ಲ್ಯಾಂಡ್ಸ್, ದೇವಿ ಚಿತ್ರಮಂದಿರದವರು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಲು ಮುಂದಾಗಿದ್ದಾರೆ.‘ಚೆನ್ನೈನಲ್ಲಿ ಕನ್ನಡ ಚಿತ್ರಗಳ ಬಗ್ಗೆ ಒಲವಿದೆ. ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆ ಎಲ್ಲರ ಗಮನ ಸೆಳೆದಿದೆ. ಹೊರ ರಾಜ್ಯದಲ್ಲೂ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇದೆ ಎನ್ನುವು ದನ್ನು  ಈ ಚಿತ್ರೋತ್ಸವ ತೋರಿಸಿ ಕೊಟ್ಟಿತು’ ಎಂದು ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.  ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್,   ಪವನ್ ಕುಮಾರ್ ಭಾಗವಹಿಸಿದ್ದರು.

*

ಮೂರು ಕಡೆ ಚಲನಚಿತ್ರೋತ್ಸವ

ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ದ್ದರಿಂದ ಮುಂಬೈ, ಕೋಲ್ಕತ್ತ, ತಿರುವನಂತಪುರದಲ್ಲಿ ಕನ್ನಡ ಚಿತ್ರೋತ್ಸವ ಆಯೋಜಿಸಲು  ಅಕಾಡೆಮಿಯು ಸಜ್ಜಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್‌ ಎಚ್‌.ಬಿ.ದಿನೇಶ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.