ಮಂಗಳವಾರ, ಜನವರಿ 21, 2020
29 °C

ಚೆಸ್: ಆನಂದ್‌ಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ.ಭಾನುವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಆನಂದ್ 0.5–1.5 ರಲ್ಲಿ ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ಅವರಿಗೆ ಶರಣಾದರು.ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಉತ್ತಮ ಆಟ ತೋರಿದ್ದ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಇದೇ ಆಟವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲರಾದರು.ಎರಡನೇ ಪಂದ್ಯದಲ್ಲಿ ಬಿಳಿಯ ಕಾಯಿಗಳೊಂದಿಗೆ ಆಡಿದ ಆನಂದ್, 15ನೇ ನಡೆಯಲ್ಲಿ ಎಸಗಿದ ತಪ್ಪಿನಿಂದಾಗಿ   ನಿರಾಸೆ ಅನುಭವಿಸಿದರು.

ಪ್ರತಿಕ್ರಿಯಿಸಿ (+)