ಶನಿವಾರ, ಮೇ 8, 2021
27 °C

ಚೆಸ್: ಡ್ರಾ ಸಾಧಿಸಿದ ಆನಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ತಾಲ್ ಮೆಮೋರಿಯಲ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ನಿರಾಸೆ ಕಂಡಿದ್ದು, ಶನಿವಾರದ ಎರಡನೇ ಸುತ್ತಿನಲ್ಲಿ ರಷ್ಯಾದ ಡಮಿಟ್ರಿ ಆ್ಯಂಡ್ರೆಕಿನ್ ವಿರುದ್ಧ ಚೇತರಿಕೆಯ ಸಾಮರ್ಥ್ಯ ತೋರಿದರಾದರೂ ಡ್ರಾಗೆ ತೃಪ್ತಿ ಪಟ್ಟಿದ್ದಾರೆ.



ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಮ್ಯಾಗ್ನಸ್ ಕಾರ್ಲ್‌ಸನ್, ರಷ್ಯಾದ ಸೆರ್ಜೆಯ್ ಕರ್ಜಾನಿಕ್ ಜತೆಗೆ ಪಾಯಿಂಟ್ ಹಂಚಿಕೊಂಡರು.



ಎರಡನೇ ಸುತ್ತಿನ ಅಂತ್ಯಕ್ಕೆ ಕಾರ್ಲ್‌ಸನ್, ಗೆಲ್ಫಾಂಡ್ ಹಾಗೂ ಮಮೆಡ್ಯಾರೊವ್ ಅವರು ತಲಾ 1.5 ಪಾಯಿಂಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.



ಇನ್ನೂ ಏಳು ಸುತ್ತುಗಳು ಬಾಕಿ ಇದ್ದು, ಭಾರತದ ವಿಶ್ವನಾಥನ್ ಆನಂದ್ 0.5 ಪಾಯಿಂಟ್‌ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.