ಶುಕ್ರವಾರ, ಮಾರ್ಚ್ 5, 2021
28 °C

ಛಾಯಾಗ್ರಹಣ ದಿನ: 19ರಿಂದ ರಾಷ್ಟ್ರಮಟ್ಟದ ವಿಚಾರಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಾಯಾಗ್ರಹಣ ದಿನ: 19ರಿಂದ ರಾಷ್ಟ್ರಮಟ್ಟದ ವಿಚಾರಸಂಕಿರಣ

ಉಡುಪಿ: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಮಣಿಪಾಲ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಕಮ್ಯೂನಿಕೇಷನ್‌ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಆಗಸ್ಟ್‌ 19 ಮತ್ತು 20ರಂದು ಆಯೋಜಿಸಿದೆ.ಖ್ಯಾತ ಸಾಕ್ಷ್ಯಚಿತ್ರ ಛಾಯಾಗ್ರಾಹಕ ಸುಧಾರಕ್‌ ಓಲ್ವೆ ಅವರು ಛಾಯಾಗ್ರಹಣದ ಬಗ್ಗೆ ವಿಚಾರ ಸಂಕಿರಣ ನಡೆಸಿಕೊಡುವರು. ಅದೇ ದಿನ ರಾಜ್ಯದ ಪ್ರಮುಖ ಪತ್ರಿಕೆಗಳ ಛಾಯಾಗ್ರಾಹಕರು ಸುಧಾರಕ್‌ ಹಾಗೂ ಆಸ್ಟ್ರೋ ಮೋಹನ್‌ ಅವರೊಂದಿಗೆ ಛಾಯಾಗ್ರಹಣ ಪತ್ರಿಕೋದ್ಯಮ ವಿಷಯ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವರು. ಆಸ್ಟ್ರೋ ಮೋಹನ್ ಅವರು ‘ಗತಕಾಲದ, ಪ್ರಸ್ತುತ ಮತ್ತು ಭವಿಷ್ಯದ ಛಾಯಾ ಪತ್ರಿಕೋದ್ಯಮ’ ವಿಷಯ ಕುರಿತ ಕಾರ್ಯಾಗಾರ ಇದೇ 20ರಂದು  ನಡೆಸಿಕೊಡುವರು.ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವವರು, ವಿದ್ಯಾರ್ಥಿಗಳು, ಛಾಯಾಗ್ರಾಹಕರು ಹಾಗೂ ಪತ್ರಕರ್ತರು ಭಾಗವಹಿಸಲು ಅವಕಾಶ ಇದೆ. ₹600 ಪ್ರವೇಶ ಶುಲ್ಕ ನೀಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 94499 50480 ಹಾಗೂ 90101 15562 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.