ಕವಿತಾಳ: ಪಟ್ಟಣದ ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಕಳೆದ ಮೂರು ದಿನಗಳಿಂದ ಕಾರ್ಯ ಸ್ಥಗಿತಗೊಂಡಿದ್ದು, ವಿವಿಧ ಪ್ರಮಾಣ ಪತ್ರ ಪಡೆಯಲು ಆಗಮಿಸುವ ರೈತರು ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಲು ಮತ್ತು ಬ್ಯಾಂಕ್ನಲ್ಲಿ ಸಾಲ ಸೌಲಭ್ಯ ಪಡೆಯಲು, ಇನ್ನಿತರ ಕೆಲಸಗಳಿಗೆ ಅವಶ್ಯವಿರುವ ಪಹಣಿ ಪಡೆಯಲು ರೈತರು ಸಾಧ್ಯವಾಗುತ್ತಿಲ್ಲ. ಪಟ್ಟಣ ಸೇರಿದಂತೆ ಹೀರಾ, ಚಿಂಚಿರಿಕಿ, ಬುಳ್ಳಾಪುರ, ತೊಪ್ಪಲದೊಡ್ಡಿ, ಹುಸೇನಪುರ ಇನ್ನಿತರ ಗ್ರಾಮಗಳ ರೈತರು ಕೃಷಿ ಚಟುವಟಿಕೆಗಳನ್ನು ನಿಲ್ಲಿಸಿ ಪಹಣಿ ಪಡೆಯಲು ಮೂರು ದಿನಗಳಿಂದ ಅಲೆಯುತ್ತಿದ್ದಾರೆ.

ಶಾಲಾ, ಕಾಲೇಜುಗಳ ಪ್ರವೇಶ ಪಡೆಯಲು ಅಗತ್ಯವಾಗಿ ಬೇಕಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ಆಗಮಿಸುವ ವಿದ್ಯಾರ್ಥಿಗಳು ಇಡೀ ದಿನ ಶಾಲೆ ಬಿಟ್ಟು ಜನಸ್ನೇಹಿ ಕೇಂದ್ರದ ಹತ್ತಿರ ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ.

ಪಟ್ಟಣದ ಬಸ್ ನಿಲ್ದಾಣದಿಂದ ಅಂದಾಜು 2ಕಿ.ಮೀ ದೂರದಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಜನಸ್ನೇಹಿ ಕೇಂದ್ರ ತೆರೆಯಲಾಗಿದ್ದು, ವಾಹನ ಸೌಕರ್ಯ ಇಲ್ಲದ ಕಾರಣ ಜನರು ಕಚೇರಿಗೆ ಅಲೆದು ಬೇಸತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಸೇವೆ ಸ್ಥಗಿತವಾಗಿದ್ದು ತೊಂದರೆಯಾಗಿದೆ ಎಂದು ಜನಸ್ನೇಹಿ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.

`ಅರ್ಜಿ ಸಲ್ಲಿಸಿ 20ದಿನ ಕಳೆದರೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದೊರಕಿಲ್ಲ' ಎಂದು ಇಸ್ಮಾಯಿಲ್ ಟಪ್ಪಾ ಆರೋಪಿಸುತ್ತಾರೆ.

`ಮಳೆ ಬಂದಿದ್ದರಿಂದ ತಾಂತ್ರಿಕ ತೊಂದರೆಯಾಗಿದೆ. ಶೀಘ್ರವೇ ದುರಸ್ತಿ ಮಾಡಲಾಗುವುದು' ಎಂದು ಬಿಎಸ್ಎನ್ಎಲ್ ಸಿಬ್ಬಂದಿ ರುದ್ರಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.