ಮರಿಯಮ್ಮನಹಳ್ಳಿ: ಸ್ಥಳೀಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ನೀರಸವಾಗಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 32 ಅರ್ಜಿಗಳು ಸಲ್ಲಿಕೆಯಾದವು.

ಮಾಹಿತಿ ಮತ್ತು ಪ್ರಚಾರದ ಕೊರತೆಯಿಂದಾಗಿ ಬೆರಳಣಿಕೆಯಷ್ಟು ಜನರ ಸಮ್ಮುಖದಲ್ಲಿ ಬೆಳಿಗ್ಗೆ ಹತ್ತಕ್ಕೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 12ಕ್ಕೆ ಆರಂಭವಾಯಿತು. ಸಭೆಯಲ್ಲಿ ಬಹುತೇಕ ಅರ್ಜಿಗಳು ಕುಡಿಯುವ ನೀರು, ಚರಂಡಿಗೆ ವ್ಯವಸ್ಥೆ ಸರಿಪಡೆಸುವಂತೆ, ಸೊಳ್ಳೆಗಳ ಹಾವಳಿ ತಡೆಯುವಂತೆ ಸಂಬಂಧಿಸಿದಂತೆ, ಪಡಿತರ ಚೀಟಿ, ಆಶ್ರಯ ಮನೆ ಇತರೆ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಪಂಚಾಯಿತಿಯಲ್ಲಿ ಅಧ್ಯಕ್ಷರಾಗಲಿ, ಉಪಾಧ್ಯಕ್ಷರು ಸೇರಿಂದತೆ ಜನಪ್ರತಿನಿಧಿಗಳು ಸರಿಯಾಗಿ ಇರದೆ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅಲ್ಲದೆ ಈ ಸಭೆಗೂ ಹಾಜರಾಗದೇ ಅಸಡ್ಡೆ ತೋರಿಸುತ್ತಿದ್ದಾರೆಂದು ಆಕ್ಷೇಪಿಸಿದರು. ಅಲ್ಲದೆ ಕುಡಿಯುವ ನೀರನ್ನು ತಿಳಿದಾಗ ವಾರ್ಡ್ಗಳಿಗೆ ಬಿಡುತ್ತಿದ್ದು, ಅವ್ಯವಸ್ಥೆಯುಂಟಾಗಿದೆ, ಜಲಾಶಯದಿಂದ ಬಿಡುವ ನೀರು ಶುದ್ಧೀಕರಿಸದೇ ಕಚ್ಚಾ ನೀರನ್ನೇ ಬಿಡುತ್ತಿದ್ದಾರೆಂದು ದೂರಿದರು.

ತಾ.ಪಂ. ಸದಸ್ಯ ಯು. ಸೋಮಪ್ಪ ಮಾತನಾಡಿ, ಜನಸ್ಪಂದನ ಸಭೆ ನಡೆಸುವಾಗ ಕೆಲ ದಿನಗಳ ಮುಂಚೆಯೇ ಹೋಬಳಿ ವ್ಯಾಪ್ತಿಯ ಪಂಚಾಯಿತಿಗಳಿಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ತಿಳಿಯಪಡೆಸಬೇಕಿದೆ ಎಂದು ಸಲಹೆ ನೀಡಿದರು.

ಜಿ.ಪಂ. ಸದಸ್ಯೆ ತಿಪ್ಪಿಬಾಯಿ ಠಾಕ್ರಾನಾಯ್ಕ, ತಾ.ಪಂ. ಉಪಾಧ್ಯಕ್ಷೆ ಬಾಣದ ಸೀತಮ್ಮ, ಡಣಾಪುರ ಗ್ರಾ.ಪಂ. ಅಧ್ಯಕ್ಷ ಎನ್. ಮುದುಕಪ್ಪ, ಉಪ ತಹಶೀಲ್ದಾರ್ ನಾಗರಾಜ್, ಕೃಷಿ ಅಧಿಕಾರಿ ಕೆ.ಕರಿಯಪ್ಪ, ಜೆಸ್ಕಾಂ ಅಧಿಕಾರಿ ರುದ್ರಪ್ಪ ಆಡೂರು, ಕಂದಾಯ ನಿರೀಕ್ಷಕ ನಾಗರಾಜ, ಎಡಿಒ ಶರಣಬಸಪ್ಪ, ಆಹಾರ ನಿರೀಕ್ಷಕ ಮಲ್ಲಿಕಾರ್ಜುನ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಶಿರೇಸ್ತೆದಾರ ಶಿವರುದ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.