ಬೆಂಗಳೂರು: ‘ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಕಸ ಸಮಸ್ಯೆ ಗಂಭೀರವಾಗಿದೆ. ಬೀದಿನಾಯಿಗಳ ಉಪಟಳ ವಿಪರೀತವಾಗಿದೆ’.

ಯಲಹಂಕದ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಯಲಹಂಕ ಉಪನಗರ ವಾರ್ಡ್ ಸಂಖ್ಯೆ–4ರ ವ್ಯಾಪ್ತಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯ ಕ್ರಮದಲ್ಲಿ ನಿವಾಸಿಗಳು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಪಾದಚಾರಿ ಮಾರ್ಗ ಅತಿಕ್ರಮಣ, ಅಡ್ಡಾದಿಡ್ಡಿ ವಾಹನ ನಿಲುಗಡೆ, ಬೀದಿನಾಯಿ ಮತ್ತು ಸೊಳ್ಳೆಕಾಟ, ಬಾರ್ಗಳ ಹಾವಳಿ ಹಾಗೂ ಅಪೂರ್ಣ ಗೊಂಡಿರುವ ಕಾಮಗಾರಿಗಳು ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ‘ಮುಖ್ಯರಸ್ತೆ ಹಾಗೂ ರಸ್ತೆಯ ತಿರುವುಗಳಲ್ಲಿ ಕಸ ಬಿದ್ದಿರುತ್ತದೆ. ಈ ಬಗ್ಗೆ ಬಿಬಿಎಂಪಿಯವರನ್ನು ಕೇಳಿದರೆ ಬಿವಿಜಿಯವರ ಮೇಲೆ ಹೇಳುತ್ತಾರೆ. ಅವರ ನ್ನು ಪ್ರಶ್ನಿಸಿದರೆ ಕೆಲಸಗಾರರು ಇಲ್ಲ ಎಂದು ಹೇಳುತ್ತಾರೆ. ಈ ಸಮಸ್ಯೆಗೆ ಪರಿಹಾರ ಏನು?’ ಎಂದು ಸಿಟಿಜನ್ ಫೋರಂನ ಅರುಣ್.ಸಿ ಶರ್ಮ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್, ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.ಇದರಿಂದ ತೃಪ್ತರಾಗದ ಅವರು, ‘ನೀವೆಲ್ಲಿ ಬಗೆಹರಿಸುತ್ತೀರಿ, ಕಳೆದ 10 ವರ್ಷದಿಂದ ನಮ್ಮ ವೇದಿಕೆಗೆ ಇದೇ ಉತ್ತರ ಸಿಗುತ್ತಿದೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎಂದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಂಟಿ ಆಯುಕ್ತ ಎಸ್.ಸರ್ಫರಾಜ್ ಖಾನ್, ‘ಪ್ರತಿದಿನ ಎಲ್ಲಕಡೆ ಕಸವನ್ನು ತೆಗೆಯ ಲಾಗುತ್ತಿದೆ. ಕಸ ಎತ್ತಿದ ತಕ್ಷಣ ಮತ್ತೆ ಅದೇ ಜಾಗದಲ್ಲಿ ಕಸ ಹಾಕುತ್ತಿದ್ದಾರೆ. ಬಿವಿಜಿಯವರಿಗೆ ಗುತ್ತಿಗೆ ಕೊಟ್ಟು 60 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬೇ ಕೆಂದು ಹೇಳಿದರೆ, ಅವರು 20ರಿಂದ 30 ಜನರನ್ನು ಕೊಡುತ್ತಿದ್ದಾರೆ. ಕಳೆದ ವಾರ್ಡ್ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಕೆಲವು ವಾರ್ಡ್ಗಳಲ್ಲಿ ನಿಯಮಗಳನ್ನು ಜಾರಿಗೆ ತಂದು ಕಸ ವಿಲೇವಾರಿಯ ಜವಾಬ್ದಾರಿಯನ್ನು ನಾಗರಿಕರಿಗೆ ವಹಿಸಿ, ಇದನ್ನು ಗಮನಿಸಲು ಅಧಿಕಾರಿಗೆ ಸೂಚಿಸಲಾಗಿದೆ. ಇದೇ ಪದ್ಧತಿಯನ್ನು ಈ ವಾರ್ಡ್ನಲ್ಲಿಯೂ ಜಾರಿಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಯಲಹಂಕ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಬೆಸ್ಕಾಂ ಧೋರಣೆಯಿಂದ ಮಕ್ಕಳ ವಿದ್ಯಾಭ್ಯಾಸ, ಮನೆಕೆಲಸಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ ಸಾಕಷ್ಟು ವಿದ್ಯುತ್ ಉಪಕರಣಗಳು ಹಾಳಾಗಿವೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಚಿಕ್ಕಬೊಮ್ಮಸಂದ್ರ ನಿವಾಸಿ ರಮೇಶ್ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್.ಆರ್. ವಿಶ್ವನಾಥ್, ಯಾವುದಾದರೊಂದು ಸಮಯವನ್ನು ನಿಗಧಿಪಡಿಸಿ, ವಿದ್ಯುತ್ ಕಡಿತಗೊಳಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪೀಣ್ಯ ವಿದ್ಯುತ್ ಪ್ರಸರಣ ಕೇಂದ್ರದಿಂದ ಪುಟ್ಟೇನಹಳ್ಳಿಯ ಉಪಕೇಂದ್ರಕ್ಕೆ 220ಕೆವಿ ವಿದ್ಯುತ್ ಮಾರ್ಗ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆನಂತರ ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನಿಡಿದರು.

‘ಯಲಹಂಕ ಉಪನಗರದಲ್ಲಿರುವ ಮದರ್ ಡೇರಿಯ ಸಂಸ್ಕರಣಾ ಘಟಕದಿಂದ ಹೊರಬರುವ ಕಲುಷಿತ ನೀರಿನಿಂದ ಮಾತೃ ಬಡಾವಣೆ ಹಾಗೂ ಶಾರದಾ ನಗರದ ಪ್ರದೇಶಗಳಲ್ಲಿ ಹರಡಿರುವ ಕೆಟ್ಟ ವಾಸನೆಯಿಂದ ಜನರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ರಸ್ತೆಯಲ್ಲಿ ಡೇರಿಯ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ’ ಎಂದು ಮಾತೃ ಬಡಾವಣೆ ನಿವಾಸಿ ಶಂಕರರೆಡ್ಡಿ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಲಹಂಕ ಸಂಚಾರ ವಿಭಾಗದ ಎಸ್ಐ ಸಿ.ನಾಗರಾಜ್, ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದಂಡ ವಿಧಿಸುವ ಮೂಲಕ ಕಠಿಣಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಅಳ್ಳಾಳಸಂದ್ರ ಕೆರೆಯಿಂದ ಡೇರಿ ವೃತ್ತದವರೆಗೆ 80 ಅಡಿ ರಸ್ತೆಯಿದ್ದು, ಈ ರಸ್ತೆಯಲ್ಲಿ 15 ರಾಷ್ಟ್ರೀಕೃತ ಬ್ಯಾಂಕುಗಳು, ಟ್ರಾವೆಲ್್ಸ ಆಫೀಸ್ಗಳು, ವಾಣಿಜ್ಯ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ತುಂಬಾ ಜನಸಂದಣಿ ಮತ್ತು ವಾಹನದಟ್ಟಣೆಯಿದೆ. ಪೊಲೀಸರು ತಿಳಿವಳಿಕೆ ನೀಡಿದ್ದರೂ ವಾಹನಸವಾರರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ’ ಎಂದು ಯಲಹಂಕ ಯುನೈಟೆಡ್ ಎನ್ವಿರಾನ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಸ್.ಟಿ. ತಾಯಪ್ಪ ದೂರಿದರು.

ಯಲಹಂಕದಲ್ಲಿ ಅಂಬೇಡ್ಕರ್ ಭವನ, ಮಿನಿ ವಿಧಾನಸೌಧ ಸೇರಿದಂತೆ ಹಲ ವಾರು ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣ ಗೊಳಿ ಸಬೇಕು ಎಂದು ವಿವಿಧ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಆಗ್ರಹಿಸಿದರು.

ಹಸುಗಳ ಕಾಟ ಹೆಚ್ಚಾಗಿದೆ
ಯಲಹಂಕದ ರೈತರ ಸಂತೆ ಬಳಿ ರಸ್ತೆಯಲ್ಲೇ ಹಸುಗಳು ಮಲಗಿರುತ್ತವೆ. ತರಕಾರಿ ತ್ಯಾಜ್ಯ ರಸ್ತೆಯ ಮೇಲೆಲ್ಲಾ ಹರಡಿರುತ್ತದೆ. ಜೊತೆಗೆ ಭಿಕ್ಷುಕರ ಕಾಟ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂ ದರೆಯಾಗುತ್ತಿದೆ. -ಮಾಲಿನಿ, ಸ್ಥಳೀಯ ನಿವಾಸಿ

ಸತ್ತವರ ಚಿತ್ರ ತೆಗೆಸಿ
ಮರಣ ಹೊಂದಿ ಹಲವು ದಿನಗಳಾಗಿದ್ದರೂ ಸತ್ತವರ ಭಾವಚಿತ್ರಗಳನ್ನು ಹಾಗೆಯೇ ಬಿಟ್ಟಿರುತ್ತಾರೆ. ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಅವರ ಭಾವಚಿತ್ರಗಳು ಎದುರಾಗುತ್ತವೆ. ಕೂಡಲೇ ಅಂತಹ ಭಾವಚಿತ್ರಗಳನ್ನು ತೆರವುಗೊಳಿಸಬೇಕು.- ಆಜಾದ್ ಚಂದ್ರಶೇಖರ್, ಯಲಹಂಕ ಉಪನಗರ ನಿವಾಸಿ

ಶಾಸಕರು ಹಾಗೂ ಅಧಿಕಾರಿಗಳ
ಮೊಬೈಲ್ ಸಂಖ್ಯೆಗಳು
* ಶಾಸಕ ಎಸ್.ಆರ್.ವಿಶ್ವನಾಥ್–9845017811

* ಬಿಬಿಎಂಪಿ ಯಲಹಂಕ ವಲಯದ ಜಂಟಿಆಯುಕ್ತ ಎಸ್.ಸರ್ಫರಾಜ್ಖಾನ್–9448111066
* ಬಿಬಿಎಂಪಿ ಮುಖ್ಯ ಎಂಜಿನಿಯರ್–ಪರಮೇಶ್ವರಯ್ಯ–9480683181
* ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಎಲ್.ಅಮೃತೇಶ್–98454441 39
* ಬಿಡಿಎ ಸಹಾಯಕ ಎಂಜಿನಿಯರ್ ಕೆ.ಎಂ.ಕುಮಾರಸ್ವಾಮಿ–974039 8702
* ಪುಟ್ಟೇನಹಳ್ಳಿ ಬಿಎಂಟಿಸಿ 30ನೇ ಘಟಕದ ಡಿಪೊ ಮ್ಯಾನೇಜರ್ ಅವಿನಾಶ್–7760991411,
* ಉಪ ವಲಯ ಅರಣ್ಯಾಧಿಕಾರಿ ರಾಧಾಕೃ ಷ್ಣ–9739220658
* ಬಿಬಿಎಂಪಿ ಸಹಾಯಕ ಎಂಜಿನಿಯರ್ ರಾಮಾಂಜನೇಯ (ಎಲೆಕ್ಟ್ರಿಕಲ್)–9480684074
* ತೋಟಗಾರಿಕೆ ಇಲಾಖೆ (ಬಿಬಿಎಂಪಿ) –ಮೊಹಮದ್ ಆಲಿ–9900509060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.