ಹೈದರಾಬಾದ್ (ಐಎಎನ್ಎಸ್): ಆಂಧ್ರ ಪ್ರದೇಶ ಪೊಲೀಸರು ಶನಿವಾರ ಬಂಧಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕಾರು ಚಾಲಕನ ಮನೆಯಿಂದ 4 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸರ್ಕಾರಿ ಅಧಿಕಾರಿಯೊಬ್ಬರ ಬಂಧುಗಳ ಮನೆ ಶೋಧನೆಯನ್ನೂ ನಡೆಸಿದ್ದಾರೆ.

ಅನಂತಪುರ ಪಟ್ಟಣದಲ್ಲಿ ಪೊಲೀಸರು ಕರ್ನಾಟಕದ ಮಾಜಿ ಸಚಿವರ ಮನೆಯ ಕಾರು ಚಾಲಕ ಬಾಷಾ ಮನೆಯಲ್ಲಿ ಶೋಧ ನಡೆಸಿ 4 ಲಕ್ಷ ರೂಪಾಯಿ ನಗದು ಹಣ, 2 ಕಿಲೋ ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು.

ಚಾಲಕನ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಗಣಿಗಾರಿಕಾ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರ ಮನೆಗಳಲ್ಲೂ ಪೊಲೀಸರು ಶೋಧ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಅನಂತಪುರ ಜಿಲ್ಲಾ ನ್ಯಾಯಾಲಯವು ಇನ್ನೊಬ್ಬ ಕಾರು ಚಾಲಕ ವೆಂಕಟರಾಮಿ ರೆಡ್ಡಿ ಮತ್ತು ಸಹಾಯಕ ಈಶ್ವರ ರೆಡ್ಡಿಯನ್ನು ಶನಿವಾರ ಪೊಲೀಸ್ ವಶಕ್ಕೆ ಒಪ್ಪಿಸಿತು. ಇವರಿಬ್ಬರ ಬಳಿ ಇದ್ದ ವಾಹನದಿಂದ 5.9 ಕೋಟಿ ರೂಪಾಯಿಗಳ ನೋಟುಗಳ ಕಂತೆಯನ್ನು ವಶ ಪಡಿಸಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.