ಸೋಮವಾರ, ಏಪ್ರಿಲ್ 19, 2021
31 °C

ಜಮಖಂಡಿ ಜಿಲ್ಲಾ ರಚನೆ ಯತ್ನ: ಸಚಿವ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಜಮಖಂಡಿಯನ್ನು ಜಿಲ್ಲಾ ರಚನೆ, ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣ ಮತ್ತು ಕೃಷ್ಣಾ ನದಿಗೆ ಜಂಬಗಿ ಬಿಕೆ ಗ್ರಾಮದ ಹತ್ತಿರ ಸಂಪರ್ಕ ಸೇತುವೆ ನಿರ್ಮಾಣ ಆಗಬೇಕು ಎಂದು ದಿ.ಎ.ಜಿ. ದೇಸಾಯಿ ಅವರು ಕಂಡಿದ್ದ ಕನಸನ್ನು ಈಡೇರಿಸುತ್ತೇನೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.ಇಲ್ಲಿನ ಎ.ಜಿ. ದೇಸಾಯಿ ವೃತ್ತದಲ್ಲಿ ದಿ.ಎ.ಜಿ. ದೇಸಾಯಿ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಿದ ನಂತರ ಬಸವ ಕೇಂದ್ರದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.ಎ.ಜಿ. ದೇಸಾಯಿ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ ಸಚಿವ ಗೋವಿಂದ ಕಾರಜೋಳ, ದಿ.ಎ.ಜಿ.ದೇಸಾಯಿ ಅವರು ಕೈಕೊಂಡ ಕಾರ್ಯಗಳು ಅವಿಸ್ಮರಣೀಯ. ಸುಮಾರು 50 ವರ್ಷಗಳ ಹಿಂದೆ ಸಿಕ್ಕಲಗಾರ ಜನಾಂಗಕ್ಕೆ ನಿವೇಶನ ಒದಗಿಸಿಕೊಟ್ಟ ಅವರ ಕಾರ್ಯ, ಮುಂದಾಲೋಚನೆ, ಬಡವರ ಬಗೆಗಿನ ಕಾಳಜಿ ಹಾಗೂ ಕಳಕಳಿಗೆ ಸಾಕ್ಷಿ ಎಂದರು.ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಶಾಸಕ ಶ್ರೀಕಾಂತ ಕುಲಕರ್ಣಿ, ಕಂಚಿನ ಪುತ್ಥಳಿ ಅನಾವರಣ ಸ್ವಾಗತ ಸಮಿತಿ ಉಪಾಧ್ಯಕ್ಷ ಆರ್.ಎಸ್.ಅಕ್ಕಿ ಮಾತನಾಡಿದರು. ವಿಜಾಪುರದ ವನಶ್ರೀ ಮಠದ  ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ನೀಲಕಂಠ ಶಿವಾಚಾರ್ಯರು ಹಾಜರಿದ್ದರು.ಜಿ.ಎಸ್.ನ್ಯಾಮಗೌಡ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖನೆ ಅಧ್ಯಕ್ಷ ಜಗದೀಶ ಗುಡಗುಂಟಿ, ಅರುಣಕುಮಾರ ಶಹಾ, ದೌಲತಪ್ಪ ಗುಡ್ಲಮನಿ,  ಉಪಸ್ಥಿತರಿದ್ದರು.ಮಾಜಿ ಶಾಸಕ ಆರ್.ಎಂ.ಕಲೂತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ರವಿ ಯಡಹಳ್ಳಿ ನಿರೂಪಿಸಿದರು. ಸಂಗಮೇಶ ಗಾಣಿಗೇರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.