ಹಾವೇರಿ: ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಮಧ್ಯಮ ವರ್ಗದ ಜನರು ಕಂಗಾಲಾಗುವಂತೆ ಮಾಡಿದ್ದರೆ, ಈಗ ದಿಢೀರ್ನೇ ಗುಟ್ಕಾದ ಬೆಲೆ ರಾಕೇಟ್ ವೇಗದಲ್ಲಿ ಇರುವುದರಿಂದ ಗುಟ್ಕಾ ಪ್ರಿಯರನ್ನು ಕಂಗೆಡುವಂತೆ ಮಾಡಿದೆ.ಸುಪ್ರೀಂ ಕೋರ್ಟ್ ಪ್ಲಾಸ್ಟಿಕ್ ಸ್ಯಾಷೆಗಳಲ್ಲಿ ಗುಟ್ಕಾ ಮಾರಾಟ ನಿಷೇಧಿಸಿದ ಹಿನ್ನೆಲೆಯಲ್ಲಿ ಗುಟ್ಕಾ ಕಂಪೆನಿಗಳು ಉತ್ಪಾದನೆ ನಿಲ್ಲಿಸಿರುವುದರಿಂದ ಕೆಳದ ಒಂದು ತಿಂಗಳಿನಿಂದ ಸ್ವಲ್ಪ ಸ್ವಲ್ಪ ಬೆಲೆ ಏರಿಕೆ ಆಗುತ್ತಿದ್ದ ಗುಟ್ಕಾ ಈಗ ಇದ್ದಕ್ಕಿದ್ದಂತೆ ಮೂಲ ಬೆಲೆಯ ಒಂದುವರೆ ಪಟ್ಟು ಹೆಚ್ಚಿಗೆಯಾಗಿದೆ.

ಹೌದು, ಕಳೆದ ಒಂದು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಏ.1ರ ನಂತರ ಪ್ಲಾಸ್ಟಿಕ್ ಸ್ಯಾಷೆಗಳಲ್ಲಿ ಗುಟ್ಕಾ ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಹೊರ ಬೀಳುತ್ತಿದ್ದಂತೆ ಮಾರುಕಟ್ಟೆಯಲ್ಲಿದ್ದ ಗುಟ್ಕಾಗಳು ಬ್ಲಾಕ್ ಮಾರುಕಟ್ಟೆ ಸೇರಿಬಿಟ್ಟಿತು. ಹೀಗಾಗಿ ದಿನದಿಂದ ದಿನಕ್ಕೆ ಗುಟ್ಕಾಗಳ ದರ ಏರುತ್ತಲೇ ಸಾಗಿದೆ.

ಮಾರುಕಟ್ಟೆಯಲ್ಲಿ ಮೂರು ರೂ.ಮುಖ ಬೆಲೆಯ ಚಿಕ್ಕ ಮಾಣಿಕ ಚಂದ(ಆರ್ಎಂಡಿ) 8 ರೂ.ಗಳಿಗೆ ಏರಿದೆ. ಏಳು ರೂ.ಗಳಗೆ ದೊರೆಯುತ್ತಿದ್ದ ಮಾಣಿಕಚಂದ ದೊಡ್ಡ ಪ್ಯಾಕೇಟ್ 17 ರೂ.ಗಳಿಗೆ ಏರಿದೆ. ಎರಡು ರೂ.ಗಳ ಸ್ಟಾರ್ ಗುಟ್ಕಾ 5 ರೂ., ಮೂರು ರೂ. ದೊರೆಯುವ ಸ್ಟಾರ್ ಪ್ರೀಮಿಯಂ 6 ರೂ. ಒಂದು ರೂ. ಬೆಲೆಯ ಸಿದ್ದು ಗುಟ್ಕಾ 3 ರೂ.ಗೆ ಏರಿದೆ.ಇಷ್ಟೆಲ್ಲ ಬೆಲೆ ಏರಿಕೆಯಾದರೂ ಎಲ್ಲಿ ಬೇಕಾದಲ್ಲಿ ಇದು ಸಿಗುತ್ತಿಲ್ಲ. ಕೆಲವೆಡೆ ಹಣ ನೀಡಿದರೂ ಇಲ್ಲವೆಂಬ ಉತ್ತರ ಬರುತ್ತದೆ. ಇದ್ದರೂ ಏಕೆ ನೀಡುತ್ತಿಲ್ಲ ಎಂದರೆ, ಕಾಯಂ ಗಿರಾಕಿಗಳಿಗಾಗಿ ತೆಗೆದು ಇಟ್ಟಿದ್ದೇವೆ ಎಂಬ ಉತ್ತರ ಅಂಗಡಿಯವರಿಂದ ಬರುತ್ತದೆ.

ಅಲ್ಲದೇ ಮಾರುಕಟ್ಟೆಯಲ್ಲಿ ಗುಟ್ಕಾ ಸ್ಟಾಕ್ ಇಲ್ಲ. ಸ್ಟಾಕ್ ಇರುವ ಅಲ್ಲೊಂದು ಇಲ್ಲೊಂದು ಅಂಗಡಿಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕೆಲವೊಂದು ಗುಟ್ಕಾಗಳನ್ನು ತರುವುದನ್ನು ನಿಲ್ಲಿಸಿದ್ದೇನೆ ಎನ್ನುತ್ತಾರೆ ಬಸವೇಶ್ವರ ನಗರದ ಪಾನ್ ಅಂಗಡಿ ಮಾಲೀಕ ಮಂಜುನಾಥ ಶಿವಸಾಲಿ.

ಪಾನ್ ಮಾರಾಟದಲ್ಲಿ ಹೆಚ್ಚಳ: ಗುಟ್ಕಾ ಬೆಲೆ ಗಗನ ಮೀರಿ ಹೊರಟಿದ್ದರಿಂದ ಗುಟ್ಕಾದ ಜಾಗದಲ್ಲಿ ಜರ್ದಾ (ತಂಬಾಕು) ಪಾನ್ಗಳು ಆವರಿಸಿಕೊಳ್ಳುತ್ತಿವೆ. ಗುಟ್ಕಾ ತಿನ್ನುವವರು ಬೆಲೆ ಹೆಚ್ಚಳವಾಗಿದ್ದರಿಂದಲೋ ಅಥವಾ ಸಿಗದೇ ಇರುವ ಕಾರಣಕ್ಕೊ ಗುಟ್ಕಾ ಪ್ರಿಯರು ಪಾನ್ಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಗುಟ್ಕಾ ಬೆಲೆ ಹೆಚ್ಚಾಗುತ್ತಿದ್ದಂತೆ ಜರ್ದಾ ಪಾನ್ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಇದರಿಂದ ಕಲ್ಕತಾ 120, ತುಲಸಿ- 300, ಬಾಬಾ 300, 420 ಹೀಗೆ ಬಗೆ ಬಗೆಯ ಜರ್ದಾ ಗುಟ್ಕಾ ಪ್ರಿಯರ ಬಾಯಲ್ಲಿ ಕಾಣಿಸಿಕೊಳ್ಳುತ್ತಿದೆ. ‘ಒಂದು ದಿನಕ್ಕೆ 200 ಕಲ್ಕತ್ತಾ ಎಲೆಗಳು ಖರ್ಚಾಗುತ್ತಿದ್ದವು. ಈಗ ಅದರ ಎರಡುಪಟ್ಟು ಎಲೆಗಳು ಖರ್ಚಾಗುತ್ತಿವೆ ಎನ್ನುತ್ತಾರೆ ಮಂಜುನಾಥ.ಗುಟ್ಕಾ ಸಿಕ್ಕರೂ ವಿಪರೀತ ಬೆಲೆ ಹೆಚ್ಚಾಗಿದ್ದರಿಂದ 17 ರೂ. ಕೊಟ್ಟು ಒಂದು ಆರ್ಎಂಡಿ ತಿನ್ನುವುದಕ್ಕಿಂತ ಅದಕ್ಕಿಂತ ಕಡಿಮೆ ದುಡ್ಡಿನಲ್ಲಿ ಎರಡು 420 ಪಾನ್ ಬರುತ್ತವೆ. ಹೀಗಾಗಿ ಕಳೆದ ಎಂಟು ದಿನಗಳಿಂದ ಗುಟ್ಕಾ ತಿನ್ನುವುದನ್ನು ಬಿಟ್ಟು ಪಾನ್ ತಿನ್ನುತ್ತಿದ್ದೇನೆ ಎಂದು ಹೇಳುತ್ತಾರೆ ಮಹೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.