ರಿಯೊ ಡಿ ಜನೈರೊ (ಪಿಟಿಐ):  ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ರಿಯೊ ಒಲಿಂಪಿಕ್ ಕೂಟದ ವೈಯಕ್ತಿಕ ವಾಲ್ಟ್ ವಿಭಾಗದ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ದೀಪಾ ಎಂಟನೇ ಸ್ಥಾನ ಪಡೆದರು. ಮೊದಲ ಎಂಟು ಸ್ಥಾನ ಪಡೆದ ಸ್ಪರ್ಧಿಗಳಿಗೆ ಫೈನಲ್ಗೆ ಅರ್ಹತೆ ಲಭಿಸಿತು. ಒಲಿಂಪಿಕ್ಸ್ಗೆ ಅರ್ಹತೆ ಪಡೆದಾಗಲೇ ದೀಪಾ ಹೆಸರು ಚರಿತ್ರೆಯ ಪುಟಗಳಲ್ಲಿ ಸೇರಿತ್ತು. ಏಕೆಂದರೆ ಒಲಿಂಪಿಕ್ಸ್ನ ಜಿಮ್ನಾಸ್ಟಿಕ್ಸ್ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳೆ ಇವರು.

ಹಾಕಿಯಲ್ಲಿ ನಿರಾಸೆ: ಪಂದ್ಯದ ಕೊನೆಯ ನಿಮಿಷದಲ್ಲಿ ಆದ ತಪ್ಪಿನಿಂದಾಗಿ ಭಾರತ ಪುರುಷರ ಹಾಕಿ ತಂಡ 1–2 ಗೋಲುಗಳಿಂದ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿತು.

ಮಂಗಳವಾರ ನಡೆಯುವ ಪಂದ್ಯದಲ್ಲಿ ಪುರುಷರ ಹಾಕಿ ತಂಡ ಅರ್ಜೆಂಟೀನಾ ಮೇಲೂ, ಮಹಿಳಾ ತಂಡ ಬ್ರಿಟನ್ ವಿರುದ್ಧವೂ ಪೈಪೋಟಿ ನಡೆಸಲಿವೆ.

ಅಭಿನವ್ ಬಿಂದ್ರಾಗೆ ನಾಲ್ಕನೇ ಸ್ಥಾನ
ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಅಭಿನವ್ ಬಿಂದ್ರಾ ಅವರು 10 ಮೀಟರ್ಸ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಚಿನ್ನ ಜಯಿಸಿದ್ದ ಬಿಂದ್ರಾ ಇಲ್ಲಿ ಕಂಚಿನ ಪದಕಕ್ಕಾಗಿ ಶೂಟ್ ಆಫ್ನಲ್ಲಿ ಹೋರಾಟ ನಡೆಸಿ ನಿರಾಸೆ ಕಂಡರು. ಇದು ಬಿಂದ್ರಾ ಅವರಿಗೆ ಕೊನೆಯ ಒಲಿಂಪಿಕ್ಸ್ ಆಗಿತ್ತು.

ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದ ಗಗನ್ ನಾರಂಗ್ ಅರ್ಹತಾ ಸುತ್ತಿನಲ್ಲಿಯೇ ಪರಾಭವಗೊಂಡರು. ಟ್ರ್ಯಾಪ್ನಲ್ಲಿ ಮಾನವಜಿತ್ ಸಿಂಗ್ ಸಂಧು ಮತ್ತು ಕೈನಾನ್ ಚೆನಾಯ್ ಕೂಡ ಅರ್ಹತಾ ಸುತ್ತು ದಾಟಲು ವಿಫಲರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.