ರಾಯಚೂರು: ರಾಯಚೂರು ಜಿಲ್ಲಾ ಲೀಡ್ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿಯ ಜಲ ನಿರ್ಮಲ ವಿಭಾಗದ ಸಭಾಭವನದಲ್ಲಿ `ರಾಯಚೂರು ಜಿಲ್ಲೆಯ ವಾರ್ಷಿಕ ಸಾಲ ಯೋಜನೆ-2013-14'ನ್ನು ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜ ಬಿಡುಗಡೆ ಮಾಡಿದರು.

ವಾರ್ಷಿಕ ಸಾಲ ಪತ್ರ ಯೋಜನೆ ಬಗ್ಗೆ ವಿವರಿಸಿದ ಜಿಲ್ಲಾ ಲೀಡ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಹೈದರಾಬಾದ್ ಮುಖ್ಯ ವ್ಯವಸ್ಥಾಪಕ ಎಸ್.ಶೇಖರಗೌಡ ಅವರು, 2013-14ನೇ ಸಾಲಿನ ವಾರ್ಷಿಕ ಸಾಲ ಯೋಜನೆಯು 2,134.29 ಕೋಟಿ ಗುರಿ ಹೊಂದಿದೆ. 2012-13ರಲ್ಲಿ 1,764.17 ಕೋಟಿ ಗುರಿ ಹೊಂದಲಾಗಿತ್ತು. ಕಳೆದ ವರ್ಷದ ವಾರ್ಷಿಕ ಸಾಲ ಯೋಜನೆಗೆ ಹೋಲಿಸಿದರೆ 370.12 ಕೋಟಿ ಹೆಚ್ಚಳವಾಗಿದೆ. ಶೇ 20.98 ರಷ್ಟು ಸಾಲ ವಿತರಣೆ ಗುರಿ ಪ್ರಮಾಣ ಹೊಂದಿದೆ ಎಂದು ಹೇಳಿದರು.

ರಿಸರ್ವ್ ಬ್ಯಾಂಕ್ನ ಬೆಂಗಳೂರಿನ ಸಹ ಪ್ರಧಾನ ವ್ಯವಸ್ಥಾಪಕ ವಿ.ಶ್ರೀನಿವಾಸ, ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎನ್.ನಾರಾಯಣರಾಜು, ಜಿ.ಪಂ ಉಪಕಾರ್ಯದರ್ಶಿ ಮಹಮ್ಮದ್ ಯೂಸೂಫ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ಸಹ ಪ್ರಧಾನ ವ್ಯವಸ್ಥಾಪಕ ಆರ್.ಜಿ ಹೆಬ್ಬಾಳಕರ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.