ಜಿಲ್ಲೆಯಲ್ಲಿ ಮಳೆ ಬಿರುಸು

ಗುರುವಾರ , ಜೂಲೈ 18, 2019
24 °C

ಜಿಲ್ಲೆಯಲ್ಲಿ ಮಳೆ ಬಿರುಸು

Published:
Updated:

ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ ಸೇರಿದಂತೆ ಇತರೆಡೆ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಕೊಡಗು ಜಿಲ್ಲೆಯ ಸರಾಸರಿ ಮಳೆ 19.27ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 733.04ಮಿ.ಮೀ. ದಾಖಲಾಗಿದೆ.ಮಡಿಕೇರಿ ತಾಲ್ಲೂಕಿನಲ್ಲಿ 35.28ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 8.42ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 26.50, ನಾಪೋಕ್ಲು 22.20, ಸಂಪಾಜೆ 35, ಭಾಗಮಂಡಲ 57.40, ವಿರಾಜಪೇಟೆ ಕಸಬಾ 10.60, ಹುದಿಕೇರಿ 5.30, ಶ್ರಿಮಂಗಲ 19.20, ಅಮ್ಮತ್ತಿ 12.30, ಸೋಮವಾರಪೇಟೆ ಕಸಬಾ 25.20, ಶನಿವಾರಸಂತೆ 8.60, ಶಾಂತಳ್ಳಿ 36.40, ಕೊಡ್ಲಿಪೇಟೆ 5.40, ಸುಂಟಿಕೊಪ್ಪ 7ಮಿ.ಮೀ ಮಳೆಯಾಗಿದೆ.ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2828.64ಅಡಿಗಳು, ಹಾರಂಗಿಯ ಸುತ್ತಮುತ್ತಲ ಪ್ರದೇಏಶದಲ್ಲಿ ಬಿದ್ದ ಮಳೆ 4.60ಮಿ.ಮೀ., ಇಂದಿನ ನೀರಿನ ಒಳ ಹರಿವು 811 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 6135 ಕ್ಯೂಸೆಕ್ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry