ಕಾರವಾರ: ಜಿಲ್ಲೆಯಾದ್ಯಂತ ಮಂಗಳವಾರ ಮಳೆ ಕ್ಷೀಣಗೊಂಡಿದ್ದು, ಕರವಾಳಿ, ಮಲೆನಾಡು ಹಾಗೂ ಅರೆಬಯಲುಸೀಮೆಯ ಎಲ್ಲೆಡೆ ಬಿಸಿಲಿನ ವಾತಾವರಣವಿತ್ತು.

ಕರಾವಳಿ ಪ್ರದೇಶಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ಹಾಗೂ ಅರೆಬಯಲುಸೀಮೆಯ ಹಳಿಯಾಳ, ದಾಂಡೇಲಿ, ಮುಂಡಗೋಡದಲ್ಲಿ ಮಳೆ ಮಾಯವಾಗಿತ್ತು. ಬೆಳಿಗ್ಗೆನಿಂದಲೇ ಬಿಸಿಲಿನ ತಾಪ ಹೆಚ್ಚಿತ್ತು.

ಮಲೆನಾಡು ಪ್ರದೇಶಗಳಾದ ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರದಲ್ಲಿ ಮಳೆ ಕಡಿಮೆಯಿತ್ತು. ಕೆಲವೆಡೆ ಮೋಡ ಕವಿದ ವಾತಾವರಣ ಇತ್ತು. ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿತ್ತು.

ಜಿಲ್ಲೆಯಲ್ಲಿ 12.8 ಮಿ.ಮೀ. ಮಳೆ:  ಜುಲೈ 1 ರಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 12.8 ಮಿ.ಮೀ ಮಳೆಯಾಗಿದೆ. ಅಂಕೋಲಾ 12.2 ಮಿ.ಮೀ, ಭಟ್ಕಳ 37.2 ಮಿ.ಮೀ, ಹಳಿಯಾಳ 6.2 ಮಿ.ಮೀ, ಹೊನ್ನಾವರ 24.1 ಮಿ.ಮೀ, ಕಾರವಾರ 6.6 ಮಿ.ಮೀ, ಕುಮಟಾ 10.6 ಮಿ.ಮೀ, ಮುಂಡಗೋಡ 4 ಮಿ.ಮೀ, ಸಿದ್ದಾಪುರ 9ಮಿ.ಮೀ, ಶಿರಸಿ 7.5 ಮಿ.ಮೀ, ಜೋಯಿಡಾ 8 ಮಿ.ಮೀ, ಯಲ್ಲಾಪುರ 15 ಮಿ.ಮೀ ಮಳೆಯಾಗಿದೆ. ಜುಲೈ 1 ರಿಂದ ಇಂದಿನವರೆಗೆ 597.1ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.