ಅಥಣಿ: ತಾಲ್ಲೂಕಿನ ಅಥಣಿ ಪಟ್ಟಣ ಪ್ರದೇಶ, ಎಲ್ಲಮ್ಮನವಾಡಿ, ಕೊಕಟ ನೂರ, ಮುರಗುಂಡಿ, ಝುಂಜುವಾಡ, ಸುಟ್ಟಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಯಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಇಳೆ ಸ್ವಲ್ಪ ಮಟ್ಟಿಗೆ ತಂಪು ಕಂಡಿದೆ.

ಈ ಅಕಾಲಿಕ ಮಳೆಯಿಂದ ಬೇಸಿಗೆ ಯ ಬಿಸಿಲಿನ ಕಾವು ಕಮ್ಮಿ ಯಾಗಿದ್ದರೂ ಕೂಡ ಕಟಾವಿಗೆ ಬಂದ ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ಬೆಳೆಗೆ ಕೊಂಚ ಮಟ್ಟಿಗೆ ಹಾನಿಯಾಗಿದೆ.

ಕೆಲವು ಕಡೆ ಬೀಸಿದ ಜೊರು ಗಾಳಿಗೆ ಸಿಲುಕಿ ಮಿಡಿ ಮಾವಿನ ಕಾಯಿ ಧರೆಗೆ ಉರುಳಿವೆ. ಸಂಕೋನಹಟ್ಟಿ, ಚಿಕ್ಕಟ್ಟಿ ಮತ್ತಿತರ ಕಡೆ ಆಲಿಕಲ್ಲು ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.

ರಾಮದುರ್ಗ ವರದಿ
ರಾಮದುರ್ಗ: ತಾಲ್ಲೂಕಿನ ವಿವಿಧೆಡೆ ಬುಧವಾರ ಸಂಜೆ ಸುರಿದ ಮಳೆ ಮತ್ತು ಬಿರುಗಾಳಿಗೆ ಸಾಕಷ್ಟು ಹಾನಿ ಉಂಟಾಗಿ ರುವ ಬಗ್ಗೆ ವರದಿಯಾಗಿದೆ.

ತಾಲ್ಲೂಕಿನ ಬಟಕುರ್ಕಿ ಸುತ್ತಮುತ್ತ ಆಲಿಕಲ್ಲಿನ ಮಳೆಯಾಗಿದೆ. ಆಲಿಕಲ್ಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ವಾಹನ ಚಾಲಕರು ರಸ್ತೆ ಪಕ್ಕದ ಮರಗಳ ಆಶ್ರಯ ಪಡೆದು ಹರಸಾಹಸ ಪಟ್ಟರು.

ತಾಲ್ಲೂಕಿನ ಮಾಗನೂರು ಮಲ್ಲಾಪೂರ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ ಎಂದು ಹೇಳಲಾಗಿದೆ. ಸಾಕಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ರಾಮದುರ್ಗ ಪಟ್ಟಣದಲ್ಲಿಯೂ ಭಾರಿ ಬಿರುಗಾಳಿ ಬೀಸಿ ಸಾರ್ವಜನಿಕರನ್ನು ತಬ್ಬಿಬ್ಬುಗೊಳಿಸಿತು. ಪಟ್ಟಣದಲ್ಲಿ ಅಷ್ಟೊಂದು ಪ್ರಮಾಣದ ಹಾನಿ ಸಂಭವಿಸಿಲ್ಲ. ತುಂತುರ ಮಳೆ ಮಾತ್ರ ಬಿದ್ದಿದೆ.

ಖಾನಾಪುರ ವರದಿ
ಖಾನಾಪುರ: ಮಳೆನಾಡಿನ ಮುಕುಟ ವಾಗಿರುವ ತಾಲ್ಲೂಕಿನಲ್ಲಿ ಈ ವರ್ಷದ ಬೇಸಿಗೆ ಬಿಜಾಪುರ, ಗುಲ್ಬರ್ಗ ಹಾಗೂ ಬಳ್ಳಾರಿ ಬಿಸಿಲನ್ನೂ ಮೀರಿಸು ವಂತಿಂತ್ತು. ಬಿಸಿಲಿನ ಝಳದಿಂದ ಬೆಂದಿದ್ದ ಜನರ ಮನಕ್ಕೆ ಮಂಗಳವಾರ ಹಾಗೂ ಬುಧವಾರ ಸುರಿದ ಮಳೆ ತಂಪನ್ನು ನೀಡಿತು.

ತಾಲ್ಲೂಕಿನಾದ್ಯಂತ ಮಂಗಳವಾರ ಆಲಿಕಲ್ಲಿನ ಮಳೆ ಹಾಗೂ ಬುಧವಾರ ಗುಡುಗುಸಹಿತ ಭರ್ಜರಿ ಮಳೆ ಬಿದ್ದಿದೆ. ಮಳೆರಾಯನ ಆಗಮನದಿಂದ ರೈತಾಪಿ ಜನರಿಗೆ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಪ್ಪಣೆ ಬಂದಂತಾಗಿದೆ.

ಇಟ್ಟಿಗೆ ತಯಾರಕರಿಗೆ ಕೊಂಚ ಬಿಸಿ ಮುಟ್ಟಿಸಿರುವ ಈ ಮಳೆ ಪರೀಕ್ಷೆ ಮುಗಿಸಿ ನಿರಾಳವಾಗಿರುವ ವಿದ್ಯಾರ್ಥಿಗಳಿಗೆ ಹೊಸ ಹುರುಪನ್ನು ನೀಡಿದೆ.

ಒಟ್ಟಾರೆಯಾಗಿ ಮಳೆರಾಯನ ಆಗಮನದಿಂದ ತಾಲ್ಲೂಕಿನ ಜನರಿಗೆ ತೀವ್ರ ಸಂತೋಷವಾಗಿದೆ. ಮುಂಜಾ ನೆಯ ಸಮಯದಲ್ಲಿ ಬೀಳುತ್ತಿರುವ ಮಂಜಿನಿಂದ ತಂಪಿನ ಅನುಭವವಾದರೂ ಮಧ್ಯಾಹ್ನದ ಬಿಸಿಗಿಗೆ ಬೆವರು ಬರುತ್ತಿದ್ದು, ಸಂಜೆ ಮಳೆಯಾದ ಕಾರಣ ಮೂರು ಅನುಭವಗಳು ಒಂದೇ ದಿನದಲ್ಲಿ ಆಗಿರುವುದು ಅಪರೂಪ ವಾದಂತಾಗಿದೆ.
ಅಲ್ಲದೆ, ಚೆನ್ನಮ್ಮನ ಕಿತ್ತೂರು ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.