ಮಂಗಳವಾರ, ಮಾರ್ಚ್ 2, 2021
26 °C

ಜೂನಿಯರ್‌ ವಿಶ್ವಕಪ್‌ಗೆ ತಂಡದ ಆಯ್ಕೆ ಕಷ್ಟ: ರಾಹುಲ್ ದ್ರಾವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನಿಯರ್‌ ವಿಶ್ವಕಪ್‌ಗೆ ತಂಡದ ಆಯ್ಕೆ ಕಷ್ಟ: ರಾಹುಲ್ ದ್ರಾವಿಡ್

ಮುಂಬೈ (ಐಎಎನ್‌ಎಸ್‌): ‘ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಜೂನಿಯರ್‌ ತಂಡದಿಂದ 19 ವರ್ಷದೊಳಗಿನವರ ವಿಶ್ವಕಪ್‌ಗೆ ಅಂತಿಮ 15 ಆಟಗಾರರನ್ನು ಆಯ್ಕೆ ಮಾಡುವುದು ಕಠಿಣ ಸವಾಲು’ ಎಂದು ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.‘ತಂಡದಲ್ಲಿ ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರು ಇದ್ದಾರೆ. 30 ಸಂಭಾವ್ಯರಲ್ಲಿ ಉತ್ತಮ ತಂಡವನ್ನು ವಿಶ್ವಕಪ್‌ಗೆ ಆಯ್ಕೆಮಾಡಬೇಕು. ಇದು ಕಠಿಣ ಸಂದರ್ಭ’ ಎಂದು ದ್ರಾವಿಡ್‌ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.ಜನವರಿ 27ರಿಂದ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಜ.28ರಂದು ಷೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಐರ್ಲೆಂಡ್‌ ಎದುರು ಆಡಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.