ಸೋಮವಾರ, ಜನವರಿ 20, 2020
29 °C

ಜೂನ್-ಜುಲೈ ವೇಳೆಗೆ ಹೊಸ ಪಾಲಿಕೆಗಳ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜನಗಣತಿಯ ಮಾಹಿತಿ ಆಧರಿಸಿ, ಮುಂಬರುವ ಜೂನ್-ಜುಲೈ ವೇಳೆಗೆ ರಾಜ್ಯದಲ್ಲಿ ನೂತನ ಪಾಲಿಕೆಗಳನ್ನು ರಚಿಸಲಾಗುವುದು ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.ಹರಿಹರ ಸಮೀಪದ ಅಮರಾವತಿ ಕಾಲೊನಿಯಲ್ಲಿ ಶನಿವಾರ ಹರಿಹರ ನ್ಯಾಯಾಲಯಗಳ ಸಂಕೀರ್ಣ ಹಾಗೂ ನ್ಯಾಯಾಧೀಶರ ವಸತಿಗೃಹಗಳ ಶಂಕುಸ್ಥಾಪನಾ ಸಮಾರಂಭದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಈಗಾಗಲೇ ಜನಗಣತಿ ನಡೆಯುತ್ತಿದೆ. ಅಲ್ಲದೇ, ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಜಸನಂಖ್ಯೆ ಕುರಿತು ಇನ್ನೂ ಅಂಕಿ-ಅಂಶಗಳು ಅಂತಿಮವಾಗಿಲ್ಲ. ಹಾಗಾಗಿ, ಪುರಸಭೆ, ನಗರಸಭೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಹೊಸ ಪಾಲಿಕೆಗಳ ರಚನೆ ಜೂನ್-ಜುಲೈ ವೇಳೆಗೆ ಆಗಲಿದೆ ಎಂದರು.

ಪ್ರತಿಕ್ರಿಯಿಸಿ (+)