ಶನಿವಾರ, ಮೇ 21, 2022
26 °C

ಜೆಡಿಎಸ್‌ನತ್ತ ಒಲವು ಖಚಿತ: ಮಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ‘ಬಿಜೆಪಿ ಬೆಂಬಲಿಸುವ ಬಗ್ಗೆ ಯುವಜನತೆಯಲ್ಲಿ ಈ ಮೊದಲು ಇದ್ದ ಉತ್ಸಾಹ ಈಗ ಇಲ್ಲ. ಆ ಪಕ್ಷದ ನಿರ್ಲಜ್ಜತನದಿಂದ ಬೇಸತ್ತು ಮುಂದಿನ ಚುನಾವಣೆಯಲ್ಲಿ ಎಚ್‌ಡಿಕೆ ನೇತೃತ್ವದ ಜೆಡಿಎಸ್‌ನತ್ತ ಅವರು ವಾಲುವುದು ಖಚಿತ’ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ನುಡಿದರು.ಗುರುವಾರ ಕುಬಟೂರಿನ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರೊಂದಿಗೆ ಅನೌಪಚಾರಿಕ ಸಭೆ ನಡೆಸಿ ಅವರು ಮಾತನಾಡಿದರು.ಪಕ್ಷ ಸಂಘಟನೆ ಬಗ್ಗೆ ಸಲಹೆ, ಮಾರ್ಗದರ್ಶನಕ್ಕೆ ಮುಖಂಡರನ್ನು ಆಹ್ವಾನಿಸಿದ ಅವರು, ಕಳೆದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಗೊಂದಲ ಉಂಟಾಗಿದ್ದು, ಈ ಬಾರಿ ಸುಮ್ಮನೆ ಕೂರುವುದಿಲ್ಲ. ತಂತ್ರಕ್ಕೆ ಪ್ರತಿತಂತ್ರ ಹೆಣೆದು ಗೆಲುವಿನ ಮುನ್ನುಡಿ ಬರೆದೇ ತೀರಬೇಕು ಎಂದು ಹುರಿದುಂಬಿಸಿದರು.ಮುಂದಿನ ಬಾರಿ ಅಧಿಕಾರ ತಮ್ಮ ಕೈ ಸೇರಲಿರುವುದು ಖಚಿತ ಎಂದು ಸ್ಪಷ್ಟಪಡಿಸಿದರು.ಕಳೆದ ತಾ.ಪಂ. ಚುನಾವಣೆಯಲ್ಲಿ ಸ್ಪಷ್ಟ ಮುನ್ನಡೆ ನಮ್ಮದಾಗಿದೆ. ಬಿಜೆಪಿ, ಕಾಂಗ್ರೆಸ್ ದುರ್ಬಲಗೊಂಡಿವೆ. ಅವೆರಡೂ ಪಕ್ಷಗಳನ್ನು ಧೂಳೀಪಟ ಮಾಡಲು ಎಲ್ಲಾ ಶಕ್ತಿ ಬಳಸಿಕೊಳ್ಳಬೇಕು.ಒಬ್ಬರನ್ನು ಕಳೆದುಕೊಂಡರೆ 10 ಜನರನ್ನು ತರಬಲ್ಲ ಸಾಮರ್ಥ್ಯ ನಮಗಿದೆ. ಅದಕ್ಕಾಗಿ ನಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು. ಪಂಚಾಯ್ತಿವಾರು ಪ್ರವಾಸ ಕೈಗೊಂಡು ಸಂಘಟನೆ ಸಾಧಿಸಬೇಕು ಎಂದು ಕರೆ ನೀಡಿದರು. ಶೀಘ್ರದಲ್ಲಿಯೇ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.ಅದಕ್ಕೂ ಮುನ್ನ ಮಾತನಾಡಿದ ಪಕ್ಷದ ಮುಖಂಡರು, ಹೋಬಳಿವಾರು ಸಂಘಟನೆ, ಮುಖಂಡರು, ಕಾರ್ಯಕರ್ತರ ಗುಂಪುಗಳ ರಚನೆ, ಪಕ್ಷದ ಹಳೆಯ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಯುವಜನತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಗ್ರಾಮಗಳಿಗೆ ತೆರಳಿ ಭೇಟಿ ಮಾಡುವುದು, ಮೊದಲಾದ ಸಲಹೆಗಳನ್ನು ನೀಡಿದರು.

ಮುಖಂಡರಾದ ಜೆ. ಚಂದ್ರಶೇಖರ್, ಕೆ. ವೀರಪ್ಪ, ಕೆ.ಪಿ. ರುದ್ರಗೌಡ, ಎಚ್.ಕೆ. ಬಸವಂತಪ್ಪ, ದಾನಪ್ಪ, ಶ್ರೀಪಾದರಾವ್, ಸುರೇಶ್ ಒಡೆಯರ್, ಅಬು ಸಾಲೇಹ ಕಳಗುಂದ್, ಮೋಹನ್ ಜಡ್ಡಿಹಳ್ಳಿ, ಪ್ರೇಮಕುಮಾರ್, ಜಗದೀಶ್, ನಾಗೇಂದ್ರಪ್ಪ, ಸುಂದರಪ್ಪ, ಹನುಮಂತಪ್ಪ, ಪಿ.ಎಸ್. ಮಂಜುನಾಥ್ ಮೊದಲಾದವರು ಇದ್ದರು.ನಂತರ, ಪಟ್ಟಣದಲ್ಲಿ ಸಹ ಮುಖಂಡರೊಂದಿಗೆ ಮಧು ಬಂಗಾರಪ್ಪ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದರು. ಪಕ್ಷದ ತಾಲ್ಲೂಕು ಅಧ್ಯಕ್ಷ ದಾನಶೇಖರ್, ಎನ್. ಕುಮಾರ್, ಕೆ. ಅಜ್ಜಪ್ಪ, ಕುಮಾರಸ್ವಾಮಿ, ವೀರಭಧ್ರಗೌಡ,ಎಚ್. ಗಣಪತಿ, ಎಂ.ಡಿ. ಶೇಖರ್, ಜಯಶೀಲಗೌಡ, ಬಲೀಂದ್ರಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.