ಬುಧವಾರ, ಜೂನ್ 16, 2021
21 °C

ಜೆನಿತ್-12 ಉತ್ಸವಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಕೌಶಲ, ಸಾಮರ್ಥ್ಯವನ್ನು ಒರೆಗೆ ಹಚ್ಚುವ `ಜೆನಿತ್-12 ರೀಲ್ ಫಾರ್ ರಿಯಲ್~ ರಾಷ್ಟ್ರಮಟ್ಟದ ಮ್ಯಾನೇಜ್‌ವೆುಂಟ್ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.ಕುಸುಗಲ್‌ರಸ್ತೆಯಲ್ಲಿರುವ ಆಕ್ಸ್‌ಫರ್ಡ್ ಕಾಲೇಜಿನ ಬಿಬಿಎ ವಿಭಾಗವು ಈ ಉತ್ಸವ ಆಯೋಜಿಸಿದೆ. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಸಿನೆಮಾ ರಂಗದ ಉದ್ಯಮ ಹಾಗೂ ಚಟುವಟಿಕೆಗಳನ್ನು ಆಧಾರವಾಗಿ ಇಟ್ಟುಕೊಂಡು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರೀಮಿಯರ್, ನಿರ್ದೇಶಕ, ನಿರ್ಮಾಪಕ, ಕಾಸ್ಟ್ ಡೈರೆಕ್ಟರ್, ಮಾರುಕಟ್ಟೆ ತಂತ್ರಗಳು ಹಾಗೂ ಮಾಧ್ಯಮ ಪ್ರಚಾರದ ಕುರಿತು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಶುಕ್ರವಾರ ಈ ಎಲ್ಲ ಸ್ಪರ್ಧೆಗಳ ಮೊದಲ ಸುತ್ತಿನ ಸ್ಪರ್ಧೆಗಳು ನಡೆದವು.ಆತಿಥೇಯ ಹುಬ್ಬಳ್ಳಿ-ಧಾರವಾಡ ವಿದ್ಯಾರ್ಥಿಗಳ ಜೊತೆಗೆ ಬೆಳಗಾವಿ, ಗದಗ, ಹಾವೇರಿ, ವಿಜಾಪುರ, ದಾವಣಗೆರೆ ಮೊದಲಾದ ಭಾಗಗಳ 15ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಶನಿವಾರ ಸಂಜೆ 6ಕ್ಕೆ ಸ್ಪರ್ಧೆಯ ಸಮಾರೋಪ ಸಮಾರಂಭ ನಡೆಯಲಿದೆ.   ಉದ್ಘಾಟನೆ: ಸಿಡಾಕ್ ನಿರ್ದೇಶಕ ಮಹಾಂತೇಶ ಜೀವಣ್ಣವರ ಅವರು ಉತ್ಸವವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜೀವನದಲ್ಲಿ ಯಾವುದೂ ಪರಿಪೂರ್ಣವಲ್ಲ. ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ದೌರ್ಬಲ್ಯಗಳನ್ನು ಬದಿಗೊತ್ತಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಯಾವುದೇ ಕೆಲಸವಿರಲಿ,  ಅದನ್ನು ಪ್ರೀತಿಯಿಂದ ಮಾಡಿ. ಆಗ ಯಶಸ್ಸು ನಿಮ್ಮದಾಗುತ್ತದೆ ಎಂದು ನುಡಿದರು.ಕಾಲೇಜಿನ ನಿರ್ದೇಶಕ ಡಾ. ಆರ್. ವಿ. ದಾಡಿಬಾವಿ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸಂತೋಷ ಕೃಷ್ಣಾಪುರ, ಬಿಬಿಎ ವಿಭಾಗದ ಮುಖ್ಯಸ್ಥೆ ಡಾ. ಆರೀಫಾ ಹಾಗೂ ಇತರರು ಈ ಸಂದರ್ಭ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.