ಸೋಮವಾರ, ಮಾರ್ಚ್ 1, 2021
31 °C

ಜೆನ್ನಿಫರ್‌ ಲಾರೆನ್ಸ್ ದೀರ್ಘ ವಿರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆನ್ನಿಫರ್‌ ಲಾರೆನ್ಸ್ ದೀರ್ಘ ವಿರಾಮ

ನಟಿ ಜೆನ್ನಿಫರ್ ಲಾರೆನ್ಸ್ ಒಂದು ವರ್ಷ ಸುದೀರ್ಘ ಅವಧಿಯ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಹಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಆಸ್ಕರ್‌ ಪ್ರಶಸ್ತಿ ವಿಜೇತ ನಟಿ ಜೆನ್ನಿಫರ್‌ ದೀರ್ಘ ವಿರಾಮಕ್ಕೆ ತೆರಳಲಿದ್ದಾರೆ ಎಂಬ ಸುದ್ದಿಯನ್ನು ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್ ತಿಳಿಸಿದ್ದಾರೆ.ಕಳೆದ ವರ್ಷ ಜೆನ್ನಿಫರ್‌ ಲಾರೆನ್ಸ್‌ ಒಂದರ ಹಿಂದೆ ಒಂದರಂತೆ ಅನೇಕ ಚಿತ್ರಗಳಲ್ಲಿ ತಮ್ಮನ್ನು ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದರು. ಸತತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಿಂದ ಆಕೆ ಸಹಜವಾಗಿಯೇ ಬಳಲಿದ್ದರು. ಅವರಿಗೆ ವಿಶ್ರಾಂತಿಯ ಅಗತ್ಯವಿತ್ತು. ಈ ಕಾರಣದಿಂದಾಗಿ ಜೆನ್ನಿಫರ್‌ ಒಂದು ಸುದೀರ್ಘ ವಿರಾಮ ಪಡೆಯುವ ಯೋಜನೆ ಹಾಕಿಕೊಂಡಿದ್ದಾರಂತೆ.‘ದಿ ಹಂಗರ್‌ ಗೇಮ್ಸ್‌’ ಸರಣಿ ಚಿತ್ರ ಹಾಗೂ ‘ಎಕ್ಸ್‌ಮೆನ್‌’ ಸಿನಿಮಾಗಳೂ ಸೇರಿದಂತೆ ಜೆನ್ನಿಫರ್‌ ಅನೇಕ ಚಿತ್ರಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು.ಒಂದು ದಿನವೂ ಬಿಡುವು ತೆಗೆದುಕೊಳ್ಳದೇ ಈ ಚಿತ್ರಗಳಲ್ಲಿ ನಟಿಸಿದ್ದರಿಂದ ಆಕೆ ತುಂಬ ದಣಿದಿದ್ದರು. ‘ಒಂದು ವರ್ಷ ವಿಶ್ರಾಂತಿ ಪಡೆಯಲು ಇಚ್ಛಿಸಿರುವ ಜೆನ್ನಿಫರ್‌ ಈ ಸಮಯದಲ್ಲಿ ಯಾವುದೇ ಕಮಿಟ್‌ಮೆಂಟ್‌ಗಳಿಗೆ ಒಳಗಾಗುವುದಿಲ್ಲ. ಒಂದು ಸಣ್ಣ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಳ್ಳದೇ ಸಂಪೂರ್ಣ ವಿಶ್ರಾಂತಿ ಪಡೆಯುವ ಉದ್ದೇಶ ಅವರದು’ ಎಂದಿದ್ದಾರೆ ಹಾರ್ವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.