ಮಂಗಳವಾರ, ಜನವರಿ 28, 2020
19 °C

ಜೆ.ಪಿ ನಗರದಲ್ಲಿ ಕಣ್ಣಿನ ಆಸ್ಪತ್ರೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಪಶ್ಚಿಮ ಲಯನ್ಸ್ ಸಂಸ್ಥೆಯು ಜೆ.ಪಿ.ನಗರದಲ್ಲಿ  ವಿದ್ಯಾಸಾಗರ ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಲಿದೆ.ಆಸ್ಪತ್ರೆಯಲ್ಲಿ ಮಧುಮೇಹ ಅಂಧತ್ವ ತಪಾಸಣೆ ಹಾಗೂ ಚಿಕಿತ್ಸೆ­ಯನ್ನು ಉಚಿತವಾಗಿ ನೀಡಲಾಗು­ವುದು. ಸಂಶೋಧನೆಗೂ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ಅಂತರ­ರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಬ್ಯಾರಿ ಜೆ.ಪಾಮರ್ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು  ₨60 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ­ಯನ್ನು ನಿರ್ಮಾಣ ಮಾಡಲಾಗು­ವುದು ಎಂದು ಹೇಳಿದರು.ಮಧುಮೇಹದಿಂದ ಅಂಧತ್ವ ಪ್ರಕರಣ­ಗಳು ಹೆಚ್ಚಾಗುತ್ತಿವೆ. ಜನರಲ್ಲಿ ನೇತ್ರ ಆರೈಕೆಯ  ಬಗ್ಗೆ ಜಾಗೃತಿ ಮೂಡಿ­ಸಲು ನೆರವಾಗುವಂತೆ ಆಸ್ಪತ್ರೆಯು ಕಾರ್ಯನಿರ್ವಹಿಸಲಿದೆ ಎಂದರು.ಪಿ.ಎಸ್.ಪ್ರೇಮನಾಥ್, ‘ಲಯನ್ಸ್ ಕ್ಲಬ್ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಾದ ದೊಡ್ಡಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಐದು ಕಡೆಗಳಲ್ಲಿ ಮಧುಮೇಹಿ ಕಣ್ಣಿನ ಆಸ್ಪತ್ರೆಗಳನ್ನು ತೆರೆಯಲು ಚಿಂತನೆ ನಡೆಸಿದೆ’ ಎಂದು ಮಾಹಿತಿ  ನೀಡಿದರು.

ಪ್ರತಿಕ್ರಿಯಿಸಿ (+)