ಬುಧವಾರ, ಜನವರಿ 22, 2020
16 °C

ಜೆಸ್ಸಿಕಾ ಪ್ರಕರಣ: ನಟ ಮುನ್ಷಿಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರೂಪದರ್ಶಿ ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಸುಳ್ಳು ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಶಯನ್ ಮುನ್ಷಿ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ನೀಡಿದೆ.

ಮುನ್ಷಿ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ. 50 ಸಾವಿರ ರೂಪಾಯಿ ಮೌಲ್ಯದ ಬಾಂಡ್ ಮತ್ತು ಒಬ್ಬರ  ಖಾತರಿ ಪಡೆದಿದೆ. ಅಲ್ಲದೆ ವಿಚಾರಣೆ ವೇಳೆ ಹಾಜರಿರುವಂತೆ, ಸಾಕ್ಷಿ ನಾಶಪಡಿಸದಂತೆ ತಿಳಿಸಿದ್ದು,  ಕೋರ್ಟ್ ಗಮನಕ್ಕೆ ತರದೆ ದೇಶ ಬಿಡದಂತೆ ಷರತ್ತು ವಿಧಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಸಮನ್ಸ್ ಜಾರಿಗೊಂಡ ಹಿನ್ನಲೆಯಲ್ಲಿ ನ್ಯಾಯಾಲಯದ ಎದುರು ಹಾಜರಾಗಿ, ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು. ಮುನ್ಷಿ ಅವರ ಮೇಲಿರುವುದು ಜಾಮೀನು ನೀಡಬಹುದಾದ ಆರೋಪ ಎಂಬ ನೆಲೆಯಲ್ಲಿ ಮೆಟ್ರೋಪಾಲಿಟಿನ್ ನ್ಯಾಯಾಧೀಶ ವಿದ್ಯಾ ಪ್ರಕಾಶ್ ಅವರು ಜಾಮೀನು ನೀಡಿದರು.

ಪ್ರತಿಕ್ರಿಯಿಸಿ (+)