ಜೈನ್ ವಿಶ್ವವಿದ್ಯಾಲಯದ ಭಾಗವಾದ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್, ಜನವರಿ ೫, ೨೦೧೪ರಂದು ಅಭಿನಯ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ರಂಗಭೂಮಿಯಲ್ಲಿ ಆಸಕ್ತಿಯುಳ್ಳ ಉದಯೋನ್ಮುಖ ಕಲಾವಿದರಿಗೆ, ತಂತ್ರಜ್ಞರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸೃಷ್ಟಿಯಾದ ಸೃಜನಶೀಲ ವೇದಿಕೆಯೇ ಈ ಅಭಿನಯ ನಾಟಕೋತ್ಸವ. ಅಂದಹಾಗೆ, ಈ ನಾಟಕೋತ್ಸವ ಜಾಗೃತಿ ಥಿಯೇಟರ್ನಲ್ಲಿ ನಡೆಯಲಿದೆ.

ಅತ್ಯುತ್ತಮ ಕನ್ನಡ ನಾಟಕಗಳ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸುವ ಸಲುವಾಗಿ ಈ ಬಾರಿಯ ‘ಅಭಿನಯ ನಾಟಕೋತ್ಸವ’ದ ಸ್ವರೂಪದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹಿಂದಿನ ಅಭಿನಯ ಸರಣಿಗಳಲ್ಲಿ ಅತ್ಯುತ್ತಮ ನಾಟಕವಾಗಿ ಹೊರಹೊಮ್ಮಿದ ಎರಡು ನಾಟಕ ತಂಡಗಳಿಗೆ, ಈ ಬಾರಿಯ ಅಭಿನಯ ಸ್ಪರ್ಧೆಯ ಅಂತಿಮ ಸುತ್ತಿಗೆ ನೇರ ಪ್ರವೇಶ ಒದಗಿಸಲಾಗಿದೆ. ಇವರನ್ನು ಹೊರತುಪಡಿಸಿ, ಪ್ರಾಥಮಿಕ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಉಳಿದ ೨ ನಾಟಕ ತಂಡಗಳಿಗಾಗಿ ಅನ್ವೇಷಣೆ ನಡೆಸಲಾಗುತ್ತದೆ.

ಅಂತಿಮ ಸುತ್ತಿನಲ್ಲಿ ಸ್ಪರ್ಧಿಸುವ ನಾಲ್ಕು ತಂಡಗಳಿಗೆ ಕಳೆದ ಬಾರಿಯ ಬಹುಮಾನದ ಮೊತ್ತವಾದ ರೂ೧ ಲಕ್ಷವನ್ನು, ಅಂತಿಮ ಸ್ಪರ್ಧೆಯ ಮುನ್ನವೇ ತಂಡಗಳ ತಾಲೀಮಿಗಾಗಿ ವಿತರಿಸುತ್ತಿರುವುದು ಈ ಬಾರಿಯ ವಿಶೇಷ. ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ತಂಡಕ್ಕೆ ಅಭಿನಯ ಟ್ರೋಫಿ ಮತ್ತು ಸರ್ಟಿಫಿಕೇಟನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರ ಜೊತೆಗೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಹನಟ/ನಟಿ, ಅತ್ಯುತ್ತಮ ಹಾಸ್ಯನಟ/ನಟಿ, ಅತ್ಯುತ್ತಮ ರಂಗಸಜ್ಜಿಕೆ, ಅತ್ಯುತ್ತಮ ಬೆಳಕು ಹಾಗೂ ಅತ್ಯುತ್ತಮ ವಸ್ತ್ರವಿನ್ಯಾಸ ಮತ್ತು ಅಲಂಕಾರ ವಿಭಾಗಗಳಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ.

ಒಟ್ಟಿನಲ್ಲಿ ನಾಲ್ಕು ಅತ್ಯುತ್ತಮ ತಂಡಗಳ ನಡುವೆ ನಡೆಯುವ ಸ್ಪರ್ಧಾತ್ಮಕ ನಾಟಕೋತ್ಸವಕ್ಕೆ ಈ ಬಾರಿಯ ಅಭಿನಯ ಸಾಕ್ಷಿಯಾಗಲಿದೆ. 1೪ ಡಿಸೆಂಬರ್ ೨೦೧೩ ನೋಂದಣಿಗೆ ಕೊನೆ ದಿನ. ಪ್ರಾಥಮಿಕ ಸ್ಪರ್ಧೆಯು ಡಿಸೆಂಬರ್ ೨೨ರಂದು ನಡೆಯಲಿದೆ.

ಸ್ಥಳ: ಜೈನ್ ವಿಶ್ವವಿದ್ಯಾಲಯ -ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್, ಏಟ್ರಿಯಾ ಟವರ್ಸ್, ಅರಮನೆ ರಸ್ತೆ. ಮಾಹಿತಿಗೆ: ೯೮೮೦೬ ೧೬೦೦೦

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.