ಬುಧವಾರ, ಮೇ 19, 2021
26 °C

ಟಾಟಾ ಕುಸಿಬಲ್ ಕ್ವಿಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಅತಿದೊಡ್ಡ ಬಿಸಿನೆಸ್ ರಸಪ್ರಶ್ನೆ ಸ್ಪರ್ಧೆ `ಟಾಟಾ ಕ್ರುಸಿಬಲ್ ಬ್ಯುಸಿನೆಸ್ ಕ್ವಿಜ್ 2011~ ಭಾನುವಾರ ನಡೆಯಲಿದೆ.



ಬೆಂಗಳೂರು ವಲಯ ಮಟ್ಟದ ಈ ಕ್ವಿಜ್‌ನಲ್ಲಿ ಟಾಟಾ ಹಾಗೂ ಮತ್ತಿತರ ಕಾರ್ಪೊರೇಟ್ ಉದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ವಿಜೇತರಾದವರಿಗೆ 75 ಸಾವಿರ ಹಾಗೂ ರಾಷ್ಟ್ರಮಟ್ಟದಲ್ಲಿ ವಿಜೇತರಾದವರಿಗೆ 4 ಲಕ್ಷ ರೂಪಾಯಿ ಬಹುಮಾನ ದೊರೆಯಲಿದೆ.

ಸ್ಥಳ: ಸೇಂಟ್ ಜಾನ್ಸ್ ಆಡಿಟೋರಿಯಂ, ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಮುಂಭಾಗ, ಕೋರಮಂಗಲ.  ಮಧ್ಯಾಹ್ನ 2. ಪ್ರವೇಶ ಉಚಿತ. ನೋಂದಣಿಗೆ: www.tatacrucible.com.



ಪಿಇಎಸ್ ಪದವಿ

ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪದವಿ ಪ್ರದಾನ ಸಮಾರಂಭ ಶನಿವಾರ ನಡೆಯಲಿದೆ. ಡಾ. ಪಿ.ಆರ್.ಕುಮಾರ್ ಹಾಗೂ ಡಾ.ಎಚ್. ಮಹೇಶಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಆರ್.ದೊರೆಸ್ವಾಮಿ ಉಪಸ್ಥಿತರಿರುತ್ತಾರೆ. ಸ್ಥಳ: ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 100 ಅಡಿ ರಿಂಗ್ ರಸ್ತೆ, ಬನಶಂಕರಿ 3ನೇ ಹಂತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.