ಲಂಡನ್/ಮೆಲ್ಬರ್ನ್ (ಎಎಫ್ಪಿ/ಪಿಟಿಐ/ಐಎಎನ್ಎಸ್): ‘ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲ 50 ಸ್ಥಾನಗಳನ್ನು ಹೊಂದಿರುವ ಆಟಗಾರರ ಪೈಕಿ ಹದಿನಾರು ಮಂದಿ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ. ಇವರ ವಿರುದ್ಧ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿಯೂ ಪ್ರಶಸ್ತಿ ಗೆದ್ದ ಕೆಲ ಆಟಗಾರರು ಫಿಕ್ಸಿಂಗ್ನಲ್ಲಿದ್ದಾರೆ...’
ಬಿಬಿಸಿ ಮತ್ತು ಆನ್ಲೈನ್ ಬಜ್ಫೀಡ್ ನ್ಯೂಸ್ ಭಾನುವಾರ ಬಹಿರಂಗ ಮಾಡಿರುವ ಈ ಸುದ್ದಿ ಟೆನಿಸ್ ಲೋಕದಲ್ಲಿ ತಲ್ಲಣವನ್ನು ಉಂಟು ಮಾಡಿದೆ.

ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿ ಆರಂಭವಾದ ದಿನವೇ ಜಗಜ್ಜಾಹೀರಾದ ಫಿಕ್ಸಿಂಗ್ ವಿಷಯ ಆಟಗಾರರು ಹಾಗೂ ಟೆನಿಸ್ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಈ ವರದಿಯನ್ನು ಹಲವು ಟೆನಿಸ್ ಸಂಸ್ಥೆಗಳು ಸಾರಾಸಗಟಾಗಿ ತಳ್ಳಿ ಹಾಕಿವೆ.

‘ಕೆಲ ಆಟಗಾರರು ಪಂದ್ಯಗಳನ್ನು ಫಿಕ್ಸ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೆಲ ದಿನಗಳಿಂದ ಕೇಳಿ ಬಂದಿತ್ತು. ಆದ್ದರಿಂದ ಟೆನಿಸ್ ಇಂಟಿಗ್ರೀಟ್ ಯೂನಿಟ್ (ಟಿಐಯು) ಆಟಗಾರರ ಚಲನ ವಲನಗಳ ಮೇಲೆ ಹದ್ದಿನ ಕಣ್ಣು ಇಟ್ಟಿತ್ತು. ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದವರಿಗೂ ಮಹತ್ವದ ಟೂರ್ನಿಗಳಲ್ಲಿ ಆಡಲು ಅವಕಾಶ ಕೊಡಲಾಗಿದೆ. ಫಿಕ್ಸಿಂಗ್ನಲ್ಲಿ ಭಾಗಿ ಯಾದ ಆರೋಪ ಎದುರಿ ಸುತ್ತಿರುವ ಎಂಟು ಆಟಗಾರರು ಸೋಮವಾರ ಆರಂಭವಾದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡುತ್ತಿದ್ದಾರೆ’ ಎಂದು ಬಿಬಿಸಿ ಹೇಳಿದೆ.

‘ಅಮೆರಿಕ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಹಾಗೂ ಡಬಲ್ಸ್ನಲ್ಲಿ ಚಾಂಪಿಯನ್ ಆದ ಆಟಗಾರರು 16 ಆಟಗಾರರ ಪಟ್ಟಿಯಲ್ಲಿದ್ದಾರೆ’ ಎಂದೂ ವರದಿ ತಿಳಿಸಿದೆ.

‘ಹಿಂದಿನ ಫಿಕ್ಸಿಂಗ್ ಕುರಿತು ತನಿಖೆ ನಡೆಸಿದ ತಂಡ 2008ರಿಂದಲೂ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಆಗಿನಿಂದಲೂ 28 ಆಟಗಾರರು ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾಗಿ ವಿಶ್ವಾಸಾರ್ಹ ಮೂಲಗಳಿಂದ ಗೊತ್ತಾಗಿದೆ. ಆದರೆ ಈ ಕುರಿತು ದೀರ್ಘ ತನಿಖೆ ಅಗತ್ಯವಿದೆ’ ಎಂದೂ ಬಿಬಿಸಿ ಅಭಿಪ್ರಾಯ ಪಟ್ಟಿದೆ. ಆದರೆ ಯಾವ ಆಟಗಾರರ ಹೆಸರೂ ಬಹಿರಂಗ ಪಡಿಸಿಲ್ಲ.

‘ಪ್ರಮುಖ ಟೂರ್ನಿಗಳು ನಡೆದಾಗ ಆಟಗಾರರು ತಂಗುವ ಹೋಟೆಲ್ಗಳನ್ನೇ ಗುರಿಯಾಗಿರಿಸಿ ಕೊಂಡು ಫಿಕ್ಸಿಂಗ್ ನಡೆಸಲು ಯುತ್ನ ನಡೆಯುತ್ತಿತ್ತು. ಇದಕ್ಕೆ ಅಗತ್ಯವಿರುವ ಬಲವಾದ ಸಾಕ್ಷಿಗಳಿವೆ. ವೃತ್ತಿಪರ ಆಟಗಾರರ ಟೆನಿಸ್ ಸಂಸ್ಥೆ ಫಿಕ್ಸಿಂಗ್ ಬಗ್ಗೆ 2007ರಲ್ಲಿ ನಡೆಸಿದ ತನಿಖಾ ವರದಿಯ ಕೆಲ ಅಂಶಗಳು ಸೋರಿಕೆಯಾಗಿವೆ’ ಎಂದು ಬಿಸಿಸಿ ಮತ್ತು ಬುಜ್ಫೀಡ್ ತಿಳಿಸಿದೆ.

ವಿಶ್ವ ರ್ಯಾಂಕ್ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ರಷ್ಯಾದ ನಿಕೊಲಯ್ ಡಯೊಡೆಂಕೊ ಅವರು 2007ರಲ್ಲಿ ನಡೆದ ಪಂದ್ಯವೊಂದರಲ್ಲಿ 87ನೇ ರ್ಯಾಂಕ್ ಹೊಂದಿದ್ದ ಅರ್ಜೆಂಟೀನಾದ ಮಾರ್ಟಿನಾ ವಾಸೆಲ್ಲೊ ಎದುರು ಸೋತಿದ್ದರು. ಈ ಪಂದ್ಯ ಫಿಕ್ಸ್ ಆಗಿತ್ತು ಎಂದೂ ವರದಿ ಹೇಳಿದೆ.

ನಿರಾಕರಣೆ: ಈ ಎಲ್ಲಾ ಆರೋಪಗಳನ್ನು ವಿವಿಧ ಟೆನಿಸ್ ಸಂಸ್ಥೆಗಳು ತಳ್ಳಿ ಹಾಕಿವೆ. ‘ಮ್ಯಾಚ್ ಫಿಕ್ಸಿಂಗ್ ನಡೆದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಬಿಬಿಸಿ ಮತ್ತು ಬುಜ್ಫೀಡ್ ವರದಿಗಳು ಹತ್ತು ವರ್ಷಗಳ ಹಿಂದಿನದ್ದಾಗಿದೆ. ನಾವೂ ಇದರ ಬಗ್ಗೆ ತನಿಖೆ ನಡೆಸುತ್ತೇವೆ. ಹೊಸ ಮಾಹಿತಿಯನ್ನು ಕಲೆ ಹಾಕುತ್ತೇವೆ’ ಎಂದು ಎಟಿಪಿ ಮುಖ್ಯಸ್ಥ ಕ್ರಿಸ್ ಕೆರ್ಮೊಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೋಲಲು ಆಮಿಷ ಒಡ್ಡಿದ್ದರು: ಜೊಕೊವಿಚ್
ಮೆಲ್ಬರ್ನ್ (ಐಎಎನ್ಎಸ್): ‘ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಓಪನ್ ಟೆನಿಸ್ ಟೂರ್ನಿ ಆಡಲು ಹೋದಾಗ ಮೊದಲ ಸುತ್ತಿನ ಪಂದ್ಯ ದಲ್ಲಿಯೇ ಸೋಲಬೇಕು ಎಂದು ವ್ಯಕ್ತಿ ಯೊಬ್ಬ ಹೇಳಿ ಫಿಕ್ಸಿಂಗ್ನಲ್ಲಿ ಭಾಗಿಯಾಗಲು ಪ್ರಚೋದಿಸಿದ್ದ. ಇದ ಕ್ಕಾಗಿ ಆತ ₹ 1.06 ಕೋಟಿ ಹಣವನ್ನು ನೀಡು ವುದಾಗಿ ಹೇಳಿದ್ದ’ ಎಂದು ವಿಶ್ವ ರ್ಯಾಂಕ್ನಲ್ಲಿ ಅಗ್ರಸ್ಥಾನ ಹೊಂದಿರುವ ನೊವಾಕ್ ಜೊಕೊವಿಚ್ ಬಹಿರಂಗ ಪಡಿಸಿದ್ದಾರೆ.

ಸೋಮವಾರ ಆಐರಂಭವಾದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಫಿಕ್ಸಿಂಗ್ ಬಗ್ಗೆ ಪ್ರಕಟವಾದ ವರದಿಯ ಬಗ್ಗೆ ಮಾತನಾಡಿದರು.

‘ಫಿಕ್ಸಿಂಗ್ನಲ್ಲಿ ಭಾಗಿಯಾಗುವಂತೆ ನೇರವಾಗಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ’ ಎನ್ನುವ ವಿಷಯವನ್ನೂ ಸ್ಪಷ್ಟಪಡಿಸಿದರು.

‘ಆಗ ನನ್ನ ತಂಡದೊಂದಿಗೆ ಕೆಲಸ ಮಾಡುತ್ತಿದ್ದ ಕೆಲವರು ಫಿಕ್ಸಿಂಗ್ನಲ್ಲಿ ನಾನು ಭಾಗಿಯಾಗುವಂತೆ ಪ್ರಯತ್ನಿಸಿದ್ದು ನಿಜ. ಆದರೆ ಯಾರೂ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ. ವ್ಯಕ್ತಿಯೊಬ್ಬ ನನ್ನೊಂದಿಗೆ ನೇರವಾಗಿ ಮಾತನಾಡಲು ಸಾಕಷ್ಟು ಸಲ ಪ್ರಯ ತ್ನಿಸಿದ್ದ. ಆದರೆ ಅದು ಸಾಧ್ಯವಾಗಿ ರಲಿಲ್ಲ’ ಎಂದೂ ನುಡಿದರು.

‘ಫಿಕ್ಸಿಂಗ್ ನಡೆಯುತ್ತಿದೆ ಹಿಂದೆ ಕೆಲ ವರ್ಷಗಳ ಹಿಂದೆ ಗಾಳಿಸುದ್ದಿಗಳು ಹರಿದಾಡಿದ್ದವು. ಕೆಲ ಜನ ಮಾತ ನಾಡಿಕೊಂಡರು. ಕ್ರೀಡೆಯಲ್ಲಿ ಫಿಕ್ಸಿಂಗ್ ನಡೆಯುವುದನ್ನು ಯಾವ ತ್ತಿಗೂ ನಾನು ಒಪ್ಪಿಕೊಳ್ಳುವುದಿಲ್ಲ. ಇದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ. ಟೆನಿಸ್ನಲ್ಲಿ ಫಿಕ್ಸಿಂಗ್ನಂತ ಕೆಟ್ಟ ಘಟನೆಗಳಿಗೆ ಅವಕಾಶ ಕೊಡ ಬಾರದು’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.