ಸೋಮವಾರ, ಜನವರಿ 27, 2020
15 °C

ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಆದಿಲ್, ಸಿದ್ಧಾರ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆದಿಲ್ ಕಲ್ಯಾಣಪುರ್ ಹಾಗೂ ಸಿದ್ಧಾರ್ಥ್‌ ಎನ್‌.ಗೌಡ ಇಲ್ಲಿನ ಟಾಪ್ ಸ್ಪಿನ್‌ ಅಕಾಡೆಮಿಯಲ್ಲಿ ನಡೆ ಯುತ್ತಿರುವ 16 ವರ್ಷದೊಳಗಿನವರ ಎಐಟಿಎ ಚಾಂಪಿಯನ್‌ಷಿಪ್‌ ಸರಣಿ  ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.ಬಾಲಕರ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಆದಿಲ್ 4–1, 5–3 ರಲ್ಲಿ ಪ್ರಣಶ್ ಬಾಬು  ಅವರನ್ನು ಮಣಿಸಿದರು.ಇತರ ಪಂದ್ಯಗಳಲ್ಲಿ ರಿಷಿ ರೆಡ್ಡಿ 2–4, 4–2, 7–1 ರಲ್ಲಿ ಹರಿ ಸಿಂಗ್ ವಿರುದ್ಧವೂ, ಸಾಯಿ ಪ್ರಣವ್ 0–4, 5–4, 7–4 ರಿಂದ ಸೂರ್ಯ ರೆಡ್ಡಿ ಮೇಲೂ, ರಾಹುಲ್ ಶಂಕರ್ 5–3, 4–2ರಲ್ಲಿ ಮೋಹಿತ್ ನರಸಿಂಹ ಅವರನ್ನೂ, ಸಿದ್ಧಾರ್ಥ್  4–2, 4–0 ರಲ್ಲಿ ಸತ್ಯಾ ಮಾರನ್ ಎದುರೂ, ಭರತ್ 4–1, 1–4, 8–6 ರಲ್ಲಿ ದಕ್ಷಿಣೇಶ್ವರ್ ವಿರುದ್ಧವೂ, ತುಕಾರಾಮ್ 4–1, 4–0 ರಲ್ಲಿ ನಮಾ ಹೇಮನ್ ಮೇಲೂ, ಸನ್ಸಿದ್  4–0, 4–1 ರಲ್ಲಿ ಆದಿತ್ಯ ರಾವ್ ಎದುರು ಗೆಲುವು ಪಡೆದರು.

ಪ್ರತಿಕ್ರಿಯಿಸಿ (+)