ಸೇಂಟ್ ಪೀಟರ್ಸ್ಬರ್ಗ್, ರಷ್ಯಾ (ಪಿಟಿಐ): ಭಾರತದ ಸೋಮದೇವ್ ದೇವವರ್ಮನ್ ಕೊನೆಗೂ ಮೊದಲ ಸುತ್ತಿನ `ತಡೆ~ ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಸೇಂಟ್ ಪೀಟರ್ಸ್ಬರ್ಗ್ ಓಪನ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಅವರು ಎರಡನೇ ಸುತ್ತು ಪ್ರವೇಶಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಸೋಮದೇವ್ 6-2, 6-3 ರಲ್ಲಿ ಸ್ಲೊವೇಕಿಯದ ಕಾರೊಲ್ ಬೆಕ್ ವಿರುದ್ಧ ಜಯ ಸಾಧಿಸಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಕ್ರೊಯೇಷ್ಯದ ಮರಿನ್ ಸಿಲಿಕ್ ವಿರುದ್ಧ ಪೈಪೋಟಿ ನಡೆಸುವರು.

ಸೋಮದೇವ್ 68 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಭಾರತದ ಆಟಗಾರ ಈ ಹಿಂದೆ ಹಲವು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದರು. ಇದೀಗ ಅಂತಹ ನಿರಾಸೆಯಿಂದ ಹೊರಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.