ಶನಿವಾರ, ಜನವರಿ 18, 2020
20 °C

ಟೆನ್‌ಪಿನ್‌ ಬೌಲಿಂಗ್‌: ವಿಜಯ್ ಉತ್ತಮ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ರಾಷ್ಟ್ರೀಯ ಚಾಂಪಿಯನ್‌ ಕರ್ನಾಟಕದ ವಿಜಯ್‌ ಪಂಜಾಬಿ 25ನೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಉತ್ತಮ ಹೋರಾಟ ತೋರಿದರು.ಒರಾಯನ್‌ ಮಾಲ್‌ನ ‘ಬ್ಲೂ ಒ’ ಮಾಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜಯ್‌ ಒಟ್ಟು 1331 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದರು.  ಮೊದಲ ನಾಲ್ಕೂ ಸುತ್ತುಗಳಲ್ಲಿ ಕ್ರಮವಾಗಿ 233, 233, 236 ಮತ್ತು 214 ಪಾಯಿಂಟ್‌ಗಳನ್ನು ಕಲೆ ಹಾಕಿ ತಮ್ಮ ಸ್ಥಾನ ಸುಧಾರಿಸಿಕೊಂಡರು.ಕರ್ನಾಟಕದ ವರುಣ್‌ ಗಣಪತಿ ನೀರಸ ಆರಂಭ ಪಡೆದರಾದರೂ, ನಂತರದ ಸುತ್ತಿನಲ್ಲಿ ಚುರುಕಿನ ಪ್ರದರ್ಶನ ತೋರಿದರು. ತಮಿಳುನಾಡಿನ ಶಬ್ಬೀರ್ ಧನ್ಕೋಟ್‌ ಅಗ್ರಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಬೀನಾ ಹಾಗೂ ಪೂಜಾ ಹೆಗ್ಡೆ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)