ನವದೆಹಲಿ (ಪಿಟಿಐ): ಸ್ವದೇಶದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಸರಣಿ ಬಳಿಕ ಭಾರತ ತಂಡದ ಹಿರಿಯ ಹಾಗೂ ಅನುಭವಿ ಆಟಗಾರ ವಿ.ವಿ.ಎಸ್.ಲಕ್ಷ್ಮಣ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆ ಇದೆ.

ಈ ಸಂಬಂಧ ಎರಡು ಮೂರು ದಿನಗಳಲ್ಲಿ ವಿ.ವಿ.ಎಸ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ. ಆದರೆ ಇದುವರೆಗೆ ಈ ಸಂಬಂಧ ಲಕ್ಷ್ಮಣ್ ಅಥವಾ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
37 ವರ್ಷ ವಯಸ್ಸಿನ ಆಟಗಾರ ಲಕ್ಷ್ಮಣ್ 134 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 16 ವರ್ಷಗಳಿಂದ ಭಾರತ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಎನಿಸಿರುವ ಅವರು 45.97 ಸರಾಸರಿಯಲ್ಲಿ 8781 ರನ್ ಗಳಿಸಿದ್ದಾರೆ. ಅದರಲ್ಲಿ 17 ಶತಕಗಳು ಸೇರಿವೆ. ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತದಲ್ಲಿ ಅವರು ಗಳಿಸಿದ್ದ 281 ರನ್ಗಳ ಆಟ ಸ್ಮರಣೀಯ ಇನಿಂಗ್ಸ್. ಆ ಪಂದ್ಯದಲ್ಲಿ ಫಾಲೋನ್ ಪಡೆದಿದ್ದ ಭಾರತ ಬಳಿಕ ಕಾಂಗರೂ ಪಡೆಗೆ ತಿರುಗೇಟು ನೀಡಿತ್ತು.

ಭಾರತ ತಂಡ ಟೆಸ್ಟ್ನಲ್ಲಿ ಮೊಟ್ಟಮೊದಲ ಬಾರಿ ಅಗ್ರಸ್ಥಾನ ತಲುಪಿ ಐತಿಹಾಸಿಕ ಸಾಧನೆ ಮಾಡುವಲ್ಲಿ ಲಕ್ಷ್ಮಣ್ ಅವರ ಪಾತ್ರವಿತ್ತು. ಅಷ್ಟೇ ಅಲ್ಲ, 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ಗಳಿಸಿದ್ದ 73 ರನ್ಗಳ ಇನಿಂಗ್ಸ್, ದಕ್ಷಿಣ ಆಫ್ರಿಕಾ ಎದುರು ಡರ್ಬನ್ನಲ್ಲಿ ಗಳಿಸಿದ 96 ರನ್ಗಳ ಆಟ ಭಾರತಕ್ಕೆ ಗೆಲುವು ತಂದುಕೊಟ್ಟಿತ್ತು. ಹೆಚ್ಚಿನ ಸಮಯದಲ್ಲಿ ಅವರು ಶತಕ ತಪ್ಪಿಸಿಕೊಂಡಿದ್ದರು. ಏಕೆಂದರೆ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬರುತ್ತಿದ್ದ ಅವರಿಗೆ ಶತಕ ಗಳಿಸಲು ಅವಕಾಶವೇ ಸಿಗುತ್ತಿರಲಿಲ್ಲ.

ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಲಕ್ಷ್ಮಣ್ ಎಂಟು ಇನಿಂಗ್ಸ್ಗಳಿಂದ ಕೇವಲ 154 ರನ್ ಗಳಿಸಿದ್ದರು. ಆಗಲೇ ಅವರ ಸ್ಥಾನ ತೂಗುಯ್ಯಾಲೆಯಲ್ಲಿತ್ತು. ಸಾಕಷ್ಟು ಟೀಕೆಗಳನ್ನು ಅವರು ಎದುರಿಸಬೇಕಾಯಿತು. ಇಂಗ್ಲೆಂಡ್ ಪ್ರವಾಸದಲ್ಲಿ ಕೂಡ ವಿವಿಎಸ್ ಕಳಪೆ ಪ್ರದರ್ಶನ ತೋರಿದ್ದರು. ಈ ಅವಧಿಯಲ್ಲಿ ಭಾರತ ಸತತ ಎಂಟು ಟೆಸ್ಟ್ಗಳಲ್ಲಿ ಸೋಲು ಕಂಡಿತ್ತು.

ಈ ಬಲಗೈ ಬ್ಯಾಟ್ಸ್ಮನ್ 83 ಏಕದಿನ ಪಂದ್ಯಗಳಿಂದ 2338 ರನ್ ಗಳಿಸಿದ್ದಾರೆ. ಆದರೆ ನಿರಾಶೆಯ ವಿಷಯವೆಂದರೆ ಒಂದೂ ವಿಶ್ವಕಪ್ನಲ್ಲಿ ಆಡಲು ಇವರಿಗೆ ಸಾಧ್ಯವಾಗಲಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಲಕ್ಷ್ಮಣ್ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಆದರೆ ಅವರೀಗ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಹೈದರಾಬಾದ್ನಲ್ಲಿ ಆಗಸ್ಟ್ 23ರಂದು ಆರಂಭವಾಗಲಿದೆ. ಎರಡನೇ ಪಂದ್ಯ ಬೆಂಗಳೂರಿನಲ್ಲಿ ಆ.31ರಂದು ಶುರುವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.