ಬುಧವಾರ, ಜನವರಿ 22, 2020
22 °C

ಟೆಸ್ಟ್ ಕ್ರಿಕೆಟ್ ಪಂದ್ಯ: ಎರಡನೇ ದಿನದಾಟಕ್ಕೆ ಮಳೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಪಿಯರ್ (ಎಪಿ): ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಏಕೈಕ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದೆ.ಮೆಕ್‌ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಶುಕ್ರವಾರ 15.2 ಓವರ್‌ಗಳ ಆಟ ಮಾತ್ರ ನಡೆಯಿತು. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 105.2 ಓವರ್‌ಗಳಲ್ಲಿ 5 ವಿಕೆಟ್‌ಗೆ 392 ರನ್ ಗಳಿಸಿತ್ತು. ಜಾನ್ ವಾಟ್ಲಿಂಗ್ (52) ಮತ್ತು ಡಗ್ ಬ್ರೇಸ್‌ವೆಲ್ (11) ಕ್ರೀಸ್‌ನಲ್ಲಿದ್ದರು.ಕಿವೀಸ್ ತಂಡ 5 ವಿಕೆಟ್‌ಗೆ 331 ರನ್‌ಗಳಿಂದ ದಿನದಾಟ ಆರಂಭಿಸಿತ್ತು. 111 ರನ್ ಗಳಿಸಿ ಅಜೇಯರಾಗುಳಿದಿದ್ದ ನಾಯಕ ರಾಸ್‌ಟೇಲರ್ 122 ರನ್ ಗಳಿಸಿದ್ದ ವೇಳೆ ಗಾಯಗೊಂಡು ನಿವೃತ್ತಿಯಾದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 105.2 ಓವರ್‌ಗಳಲ್ಲಿ 5 ವಿಕೆಟ್‌ಗೆ 392 (ರಾಸ್ ಟೇಲರ್ 122, ಜಾನ್ ವಾಟ್ಲಿಂಗ್ ಬ್ಯಾಟಿಂಗ್ 52, ಡಗ್ ಬ್ರೇಸ್‌ವೆಲ್ ಬ್ಯಾಟಿಂಗ್ 11).

ಪ್ರತಿಕ್ರಿಯಿಸಿ (+)