ಭಾನುವಾರ, ಜನವರಿ 19, 2020
28 °C

ಟೈಟಾನ್‌ ಹೊಸ ಮೈಲಿಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೈಟಾನ್‌ ಹೊಸ ಮೈಲಿಗಲ್ಲು

ಬೆಂಗಳೂರು: ‘ಕೈಗಡಿಯಾರ ಖರೀದಿ ಆಧುನಿಕ ಜೀವನ ಶೈಲಿಯ ಭಾಗವಾಗಿ ಹೊಸ ರೂಪದಲ್ಲಿ ಬೆಳೆ­ಯುತ್ತಿದೆ. ಹೊಸ ತಲೆಮಾರಿಗೆ  ತಕ್ಕಂತೆ  5 ಬ್ರಾಂಡ್‌­ಗಳಲ್ಲಿ ವಿಶೇಷ ವಿನ್ಯಾಸದ ಗಡಿ­ಯಾರಗಳನ್ನು ಮಾರು­ಕಟ್ಟೆಗೆ ಬಿಡುಗಡೆ ಮಾಡಿ­ದ್ದೇವೆ” ಎಂದು ಟೈಟಾನ್‌ ಇಂಡಸ್ಟ್ರೀಸ್‌ನ  ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್‌ ಭಟ್‌ ಹೇಳಿದರು.  ಸೋಮವಾರ ಇಲ್ಲಿ ಕಂಪೆನಿಯ 1000 ನೇ ರಿಟೇಲ್‌ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.‘1000ನೇ ಮಳಿಗೆಗೆ ಚಾಲನೆ ನೀಡುವ ಮೂಲಕ ಟೈಟಾನ್‌ ರಿಟೇಲ್‌ ವಲಯ­ದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಸಾಧನೆ ಮಾಡಿದ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಅವರು ಹೇಳಿದರು. 1988ರಲ್ಲಿ ಟೈಟಾನ್‌ ಮೊದಲ  ಕೈಗಡಿಯಾರ ಮಳಿಗೆಯನ್ನು ಬೆಂಗಳೂ­ರಿನ ಸಫೀನಾ ಪ್ಲಾಜಾದಲ್ಲಿ ಆರಂಭಿ­ಸಿತು. ನಂತರ ಕಳೆದ 25 ವರ್ಷಗಳಲ್ಲಿ ಕಂಪೆನಿ ವಲಯದಲ್ಲಿ ಹಲವು ದಾಖಲೆಗಳನ್ನು ಬರೆದಿದೆ ಎಂದರು.

ಪ್ರತಿಕ್ರಿಯಿಸಿ (+)