ಸೋಮವಾರ, ಮೇ 23, 2022
22 °C

ಟ್ವಿಟ್ಟರ್‌ಗೆ ವಿದಾಯ ಭಾಷ್ಯ ಬರೆದ ಹೆವಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆನ್ನಿಫರ್ ಲವ್ ಹೆವಿಟ್ ಹಾಲಿವುಡ್‌ನ ಜನಪ್ರಿಯ ಮಾದಕ ನಟಿ. ಅಂದ ಚೆಂದದ ಮೂಲಕ ಪ್ರೇಕ್ಷಕರ ಮನಗೆದ್ದ ಈ ನಟಿ ಹಾಡುಗಾರ್ತಿ, ಕವಯಿತ್ರಿ, ಟೀವಿ ನಿರ್ದೇಶಕಿ, ಲೇಖಕಿ ಕೂಡ. ಸಿನಿಮಾ ಹಾಗೂ ಟ್ವಿಟ್ಟರ್‌ಗಳ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸತತ ಸಂಪರ್ಕ ಇಟ್ಟುಕೊಂಡಿದ್ದ 34ರ ಈ ಚೆಲುವೆ ಇದೀಗ ಟ್ವಿಟ್ಟರ್ ಬಿಡುವುದಾಗಿ ಹೇಳಿದ್ದಾರೆ.ಅನೇಕರು ಅಸಹ್ಯಕರ ಸಂದೇಶಗಳನ್ನು ರವಾನಿಸುತ್ತಿರುವುದು ತನ್ನ ಹಾಗೂ ಟ್ವಿಟ್ಟರ್ ಸಂಬಂಧಕ್ಕೆ ಮುಕ್ತಾಯ ಹೇಳುತ್ತಿದೆ ಎಂದು ಹೇಳಿಕೊಂಡಿರುವ ಜೆನ್ನಿಫರ್ `ಅನೇಕರು ಪ್ರೀತಿಯಿಂದ ಅಭಿಮಾನದಿಂದ ಸಂದೇಶ ಕಳುಹಿಸಿದ್ದಾರೆ. ಅವರಿಗೆ ನಾನು ಚಿರಋಣಿ.

ಆದರೆ ಅನೇಕರಿಂದ ನಕಾರಾತ್ಮಕ ಸಂದೇಶಗಳು ಬರುತ್ತಿದ್ದು ಅವುಗಳನ್ನು ನಿಭಾಯಿಸುವುದು ನನಗೆ ಕಷ್ಟವಾಗಿದೆ. ಹೀಗಾಗಿ ನನ್ನ ಹಾಗೂ ಟ್ವಿಟ್ಟರ್ ಸಂಬಂಧ ಇಲ್ಲಿಗೆ ಮುಗಿದಿದೆ ಎಂದುಕೊಳ್ಳುತ್ತೇನೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಟ್ವಿಟ್ಟರ್‌ನ್ನು ಇನ್ನೊಬ್ಬರ ವ್ಯಕ್ತಿತ್ವ ದಮನಕ್ಕೋ ಅಥವಾ ಕೆಟ್ಟತನಕ್ಕೆ ಬಳಸಬೇಡಿ ಎಂದು ಕೇಳಿಕೊಂಡಿರುವ ಅವರು `ಬದುಕು ಖುಷಿ ಖುಷಿಯಾಗಿರಬೇಕು. ಹಾಗೂ ಧನಾತ್ಮಕ ವಿಷಯಗಳಿಂದ ತುಂಬಿರಬೇಕು.

ನಾವು ಇನ್ನೊಬ್ಬರ ಬದುಕಿಗೆ ಪೂರಕವಾಗಿರಬೇಕೆ ಹೊರತು ಬೇರೆಯವರನ್ನು ಹೆದರಿಸು ವುದು, ನೋವು ಮಾಡುವುದರಲ್ಲಿ ಸಂತೋಷ ಕಾಣಬಾರದು. ಯಾರು ಇನ್ನೊಬ್ಬರ ಖುಷಿಗೆ ಕಾರಣರಾಗಿದ್ದೀರೊ ಅಂಥವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು' ಎಂದು ಟ್ವೀಟಿಸಿ ತಮ್ಮ ನಿರ್ಗಮನವನ್ನು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.