ಸೋಮವಾರ, ಜನವರಿ 20, 2020
27 °C

ಡಯಾನಾ ಹತ್ಯೆ ಆರೋಪ ಅಲ್ಲಗಳೆದ ಬ್ರಿಟನ್‌ ಪೊಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಯಾನಾ ಹತ್ಯೆ ಆರೋಪ ಅಲ್ಲಗಳೆದ ಬ್ರಿಟನ್‌ ಪೊಲೀಸ್‌

ಲಂಡನ್‌ (ಪಿಟಿಐ): ಬ್ರಿಟನ್‌ ಯುವ ರಾಣಿ ಡಯಾನಾ  ಅವರನ್ನು ಕೊಲೆ ಮಾಡಲಾಯಿತು ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು, ಈ ಆಪಾದನೆಯನ್ನು ಪುಷ್ಟೀಕರಿಸುವಂತಹ ವಿಶ್ವಾಸಾರ್ಹವಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.1997ರಲ್ಲಿ ಪ್ಯಾರಿಸ್‌ನ ಸುರಂಗ ಮಾರ್ಗದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಡಯಾನಾ ಮತ್ತು ಅವರ ಸಂಗಾತಿ ದೋದಿ ಅಲ್‌ಫಯಾದ್‌ ಅವರು ಸಾವನ್ನಪ್ಪಿದ್ದರು. ಇದರ ಹಿಂದೆ ಬ್ರಿಟನ್ನಿನ ವಿಶೇಷ ಪಡೆ ಕೈವಾಡ ಇದೆ.  ಎಂದು  ಬ್ರಿಟನ್ನಿನ ವಿಶೇಷ ವಾಯಪಡೆ ಸೇವೆಯ (ಎಸ್‌ಎಎಸ್‌) ಮಾಜಿ ಯೋಧನ ಪತ್ನಿ ದೂರಿದ್ದರು.ಈ ಆಪಾದನೆ ಬಗ್ಗೆ ಪ್ರಕಟವಾದ ಮಾಧ್ಯಮದ ವರದಿಗಳನ್ನು ಬ್ರಿಟನ್‌ ಮೆಟ್ರೊಪಾಲಿಟನ್‌ ಪೊಲೀಸರು ಪರಿಶೀಲಿಸಿದ್ದಾರೆ. ಆಪಾದನೆಯಲ್ಲಿ ಹುರುಳಿಲ್ಲದ ಕಾರಣ ಈ ಕುರಿತು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸ್ಕಾಟ್ಲೆಂಡ್‌ ಪೊಲೀಸರ ಹೇಳಿಕೆ ತಿಳಿಸಿದೆ.

ಪ್ರತಿಕ್ರಿಯಿಸಿ (+)