ಗುರುವಾರ , ಜೂನ್ 17, 2021
23 °C

ಡಾಟಾ ಮೈನಿಂಗ್: ಐದು ದಿನದ ಬೋಧಕರ ಅಭಿವೃದ್ಧಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಟಿ. ಜಾನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಈಚೆಗೆ ಡಾಟಾ ಮೈನಿಂಗ್ ಹಾಗೂ ಡಾಟಾ ವೇರ್‌ಹೌಸಿಂಗ್ ಕುರಿತು ಐದು ದಿನದ ಬೋಧಕರ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಎಂಜಿನಿಯರಿಂಗ್ ಕಾಲೇಜುಗಳ ಭೋದಕ ಸಿಬ್ಬಂದಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಸಂಶೋಧನೆ ಕುರಿತು ಪರಸ್ಪರ ಜ್ಞಾನ ವಿನಿಮಯ ಮಾಡಿಕೊಳ್ಳಲಾಯಿತು. ಡಾಟಾ ಮೈನಿಂಗ್‌ಗೆ ಸಂಬಂಧಿಸಿದಂತೆ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿರುವ ಸಂಶೋಧನಾ ಸವಾಲುಗಳ ಬಗ್ಗೆ ಚರ್ಚಿಸಲಾಯಿತು.ಡಾಟಾ ಮೈನಿಂಗ್ ಕುರಿತು ಗುಪ್ತ ವಿನ್ಯಾಸಗಳನ್ನು ಅರಿಯುವ ಹಾಗೂ ಇದಕ್ಕೆ ಸಂಬಂಧಪಟ್ಟ ಸಮಸ್ಯೆ ಬಗೆಹರಿಸಲು ಅಗತ್ಯವಿರುವ ವಿಧಾನಗಳ ಬಗ್ಗೆ ಚರ್ಚೆ ನಡೆಯಿತು.ಡಾಟಾ ಮೈನಿಂಗ್ ಹಾಗೂ ಡಾಟಾ ವೇರ್‌ಹೌಸಿಂಗ್ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಂಡಿರುವ ಶಿಕ್ಷಣ ತಜ್ಞರು ಉಪನ್ಯಾಸಗಳನ್ನು ನೀಡಿದರು. ಕಾರ್ಯಕ್ಷೇತ್ರದ ತಜ್ಞರು ಹಲವು ಪ್ರದರ್ಶನಗಳು ಹಾಗೂ ತರಬೇತಿಗಳನ್ನು ನೀಡಿದರು.ಡಾ. ಜಿ. ಶೋಭಾ, ಡಾ. ಪಿ. ದೀಪಾ ಶೆಣೈ, ಡಾ. ಜಿ.ಟಿ. ರಾಜು, ಡಾ. ಎನ್. ರಾಜ್‌ಕುಮಾರ್, ಡಾ. ಕೆ.ಜಿ.ಶ್ರೀನಿವಾಸ, ಟಿ.ಎನ್.ಮಂಜುನಾಥ್ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.